Ticker

6/recent/ticker-posts

ಅಣಂಗೂರು ಜಿ ಎಲ್ ಪಿ ಎಸ್ ಶಾಲೆಯಲ್ಲಿ ಬಾಲಸಭೆ ಮತ್ತು ಸೃಜನೋತ್ಸವ ಕಾರ್ಯಕ್ರಮ


ಕಾಸರಗೋಡು:  ಅಣಂಗೂರು  ಜಿ ಎಲ್ ಪಿ ಎಸ್  ಅಣಂಗೂರು  ಶಾಲೆಯಲ್ಲಿ ಶಾಲಾ ಮಟ್ಟದ ಬಾಲಸಭೆ ಮತ್ತು ಸೃಜನೋತ್ಸವ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಜಿ ಎಲ್ ಪಿ ಎಸ್ ಕಂಬಾರು ಶಾಲೆಯ ಪ್ರಧಾನ ಅಧ್ಯಾಪಕ ಮತ್ತು ಸಂಗೀತ ಕಲಾವಿದರಾದ ಅಮ್ಮು ಅಮ್ಮಂಗೋಡು ನೆರವೇರಿಸಿದರು.ಶಾಲೆಯ ಪ್ರಧಾನ ಅಧ್ಯಾಪಿಕೆ ಶ್ರೀಮತಿ ಶಾಂತಿ ಕೆ ಅಧ್ಯಕ್ಷತೆ ವಹಿಸಿದರು.ಸ್ಟಾಫ್ ಸೆಕ್ರೆಟರಿ ಬಿಂದು ಕೆ ಪಿ,ಹೇಮಲತಾ ವಿ ಮೊದಲಾದವರು ಶುಭಾಶಂಸನೆಗೈದರು.ಕಾರ್ಯಕ್ರಮದಲ್ಲಿ ವಿವಿಧ ಕ್ಲಬ್ ಗಳ ನೇತೃತ್ವದಲ್ಲಿ ತಯಾರಿಸಿದ ಮ್ಯಾಗಝಿನ್ (Magazine) ಗಳ ಪ್ರಕಾಶನ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜಯಿಗಳಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.SRG ಕನ್ವೀನರ್ ವಿಖ್ಯಾತ್ ರೈ ಸ್ವಾಗತಿಸಿ ಕನ್ನಡ ಅಧ್ಯಾಪಿಕೆ ಮಿಸ್ರಿಯ  ಧನ್ಯವಾದ ಹೇಳಿದರು.ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕನ್ವೀನರ್ ಲತಾ ಎಂ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments