ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಶಿಕ್ಷಿಸಲ್ಪಟ್ಟ ಸಿಪಿಎಂ ನೇತಾರ ಹಾಗೂ ಕಾಞಂಗಾಡ್ ಬ್ಲೋಕ್ ಪಂಚಾಯತು ಮಾಜಿ ಅಧ್ಯಕ್ಷ ಇ.ಮಣಿಕಂಠನ್ ರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಮಣಿಕಂಠನ್ ಅವರನ್ನು ಬ್ಲೋಕ್ ಪಂಚಾಯತು ಅಧ್ಯಕ್ಷ ಸ್ಥಾನದಿಂದಲೂ ಸದಸ್ಯತನದಿಂದಲೂ ಅನರ್ಹಗೊಳಿಸಲಾಗಿದೆ. ಮಣಿಕಂಠನ್ ಅವರನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ನೇತಾರ ಅಡ್ವ.ಎಂ.ಕೆ.ಬಾಬುರಾಜ್ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇ.ಮಣಿಕಂಠನ್ ಅವರು ಬ್ಲೋಕ್ ಪಂಚಾಯತು ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆಯೇ ರಾಜೀನಾಮೆ ನೀಡಿದ್ದರು. ಪೆರಿಯ ಅವಳಿ ಕೊಲೆ ಪ್ರಕರಣದ 14 ನೇ ಆರೋಪಿಯಾಗಿರುವ ಇ.ಮಣಿಕಂಠನ್ ಅವರಿಗೆ ನ್ಯಾಯಾಲಯ 5 ವರ್ಷಗಳ ಶಿಕ್ಷೆ ನೀಡಿತ್ತು. ಅನಂತರ ಹೈಕೋರ್ಟ್ ಈ ಶಿಕ್ಷೆಯನ್ನು ರದ್ದುಗೊಳಿಸಿತ್ತು. ಅನಂತರ ಇವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು
2019 ಫೆಬ್ರವರಿ 17 ರಂದು ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್, ಕೃಪೇಶ್ ಎಂಬಿವರನ್ನು ಇರಿದು ಕೊಲೆಗೈಯ್ಯಲಾಗಿತ್ತು
0 Comments