ಉಪ್ಪಳ:ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಚುನಾವಣೆ ನಡೆಸಲಾಯಿತು. ವಿವಿಧ ಚಿನ್ನೆ ಯಡಿ ಸ್ಪರ್ಧಿಸಿದ ಅಭ್ಯರ್ಥಿಗಳು ತಮ್ಮ ನಾಮನಿರ್ದೇಶ ಪತ್ರವನ್ನು ಚುನಾವಣಾಧಿಕಾರಿ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆಗೆ ಅವರಿಗೆ ನೀಡಿದರು. ಸಮ್ಮತಿ ಎಂಬ ಎಫ್ ನ ಮೂಲಕ ನವೀನ ರೀತಿಯಲ್ಲಿ ನಡೆಯುತ್ತಿರುವ ಚುನಾವಣೆಗೆ ಉದ್ಯಾವರ ತೋಟ ಶಾಲೆಯ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮತ್ತು ರವಿಶಂಕರ್ ಸರ್ ಸಾಕ್ಷಿಯಾದರು. ಶಾಲಾ ಶಿಕ್ಷಕ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳೇ ಚುನಾವಣಾಧಿಕಾರಿಗಳಾದರು. ಶಿಕ್ಷಕಿ ರೇಷ್ಮಾ ಅವರ ಮುಂದಾಳುತನದಲ್ಲಿ ಮತ ಎಣಿಕೆ ನಡೆದು ಶಾಲಾ ನಾಯಕನಾಗಿ ಮೊಹಮ್ಮದ್ ಅನಸ್ ಆರಿಸಲ್ಪಟ್ಟರು. ಅದೇ ರೀತಿ ವಿಜೇತರಾದ ದಕ್ಷಿತ್, ಅಭಿಯ ಹನಾನ್, ಮೊಹಮ್ಮದ್ ಸಾಹಿಲ್, ಅಬೂಬಕ್ಕರ್ ಸಿದ್ದೀಕ್ ಅವರನ್ನು ಆರೋಗ್ಯ ಆಹಾರ, ಕ್ರೀಡೆ, ವಿದ್ಯಾಭ್ಯಾಸ ಮಂತ್ರಿಗಳಾಗಿ ಆಯ್ಕೆ ಮಾಡಲಾಯಿತು. ತದನಂತರ ವಿಜಯೋತ್ಸವದ ಮೆರವಣಿಗೆ ನಡೆಯಿತು. ಹಿರಿಯ ಶಿಕ್ಷಕ ರಿಯಾಸ್ ಪೆರಿಂಗಡಿ ಸತ್ಯ ಪ್ರತಿಜ್ಞೆ ಹೇಳಿಕೊಟ್ಟರು. ಪ್ರತಿ ಮಂತ್ರಿಗಳಿಗೂ ಮಾರ್ಗದರ್ಶಕರಾಗಿ ಶಿಕ್ಷಕಿ ಅನಿತಾ ಮತ್ತು ಅನುಕೃಷ್ಣ ನಿಯುಕ್ತಗೊಂಡರು. ಶಿಕ್ಷಕಿ ಐಶ್ವರ್ಯ ರವರು ಶಾಲಾ ಕೆಲಸ ಕಾರ್ಯಗಳನ್ನು, ಮಂತ್ರಿಗಳ ಜವಾಬ್ದಾರಿ ಹಾಗೂ ಕರ್ತವ್ಯವನ್ನು ಆಮೂಲಾಗ್ರವಾಗಿ ತಿಳಿಸಿಕೊಟ್ಟರು. ತನ್ಮೂಲಕ ವಿದ್ಯಾರ್ಥಿಗಳಿಗಳು ಚುನಾವಣೆಯ ಅಗತ್ಯ ಮತ್ತು ಸರಕಾರದ ಔಚಿತ್ಯವನ್ನು ಮನಗಂಡರು. ಶಾಲಾ ಶಿಕ್ಷಕಿ ಧನ್ಯಾ ಸ್ವಾಗತಿಸಿ, ಜಸಿಲಾ ಟೀಚರು ವಂದಿಸಿದರು.
0 Comments