Ticker

6/recent/ticker-posts

ಬೈಕಿನಲ್ಲಿ ಸುತ್ತಾಡಿ ಮಹಿಳೆಯರ ಕತ್ತಿನಲ್ಲಿರುವ ಚಿನ್ನ ಎಗರಿಸುವ ಕಾಪಾ ಕಾಯ್ದೆ ಆರೋಪಿಯ ಬಂಧನ


 ಕಾಸರಗೋಡು: ಬೈಕಿನಲ್ಲಿ ಬಂದು ಮಹಿಳೆಯರ ಕತ್ತಿನಲ್ಲಿರುವ ಸರ ಎಗರಿಸುವ ಕಾಪಾ ಪ್ರಕರಣದ ಆರೋಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಉದುಮ ಪಾಕ್ಯಾರ ನಿವಾಸಿ ಮುಹಮ್ಮದ್ ಉಜಾಸ್(26) ಬಂಧಿತ ಆರೋಪಿ. ಬೇಕಲ ಇನ್ಸ್ಪೆಕ್ಟರ್ ಶ್ರೀದಾಸ್ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  ತಳಿಪರಂಬ, ಮಂಗಳೂರು, ಉಪ್ಪಿನಂಗಡಿ, ಬೇಕಲ, ಹೊಸದುರ್ಗ ಪೊಲೀಸ್ ಠಾಣೆಗಳಲ್ಲಿ ಈತನ ಹೆಸರಲ್ಲಿ ಕೇಸು ಇದೆ. ಈ ಹಿನ್ನೆಲೆಯಲ್ಲಿ ಈತನ ವಿರುದ್ದ ಕಾಪಾ ಕಾಯ್ದೆ ಬಳಸಲಾಗಿತ್ತು

Post a Comment

0 Comments