ಮುಂಡಿತ್ತಡ್ಕ: ಇಲ್ಲಿನ ಪಳ್ಳಂ ನ 41 ವರ್ಷಗಳ ಹಿರಿಯ ಸ್ಕೈಬ್ಲೂ ಸ್ಪೋರ್ಟ್ಸ್ ಅಂಡ್ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸ್ಕೈಬ್ಲೂ ಪ್ಯಾಲಿಯೇಟಿವ್ ಕೇರ್ ಸೊಸೈಟಿಯನ್ನು ಖ್ಯಾತ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಎ.ಬಿ.ಕುಟ್ಟಿಯಾನಂ ಉದ್ಘಾಟಿಸಿದರು. ಕ್ಲಬ್ಬಿನ 40 ನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ ಘೋಷಿಸಲಾದ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಶಿಕ್ಷಣ ಕ್ಷೇತ್ರಗಳ ಜೊತೆಗೆ ಆರೋಗ್ಯ ಸೇವಾ ಕ್ಷೇತ್ರದತ್ತ ಗಮನ ಹರಿಸುವ ನಿರ್ಧಾರದಿಂದ ಈ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳ ದುಃಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಾಗಿದೆ ಈ ಬೃಹತ್ ತೀರ್ಮಾನವೆಂದು ಸ್ಕೈಬ್ಲೂ ಪದಾಧಿಕಾರಿಗಳು ತಿಳಿಸಿದರು.
ದೇಶದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಧ್ವಜವನ್ನು ಹಾರಿಸಲಾಯಿತು ಮತ್ತು ಎಸ್ಸಸ್ಸೆಲ್ಸಿ ಪ್ಲಸ್ ಟು ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಹಿರಿಯ ಸ್ಕೈಬ್ಲೂ ಸದಸ್ಯ ಅಬ್ದುಲ್ ಸಲಾಂ ಧ್ವಜಾರೋಹಣ ನೆರವೇರಿಸಿದರು ಕ್ಲಬ್ಬಿನ ಅಧ್ಯಕ್ಷ ಮುಸ್ತಫಾ ವಳಮುಗರು ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಯಾಗಿ ಬದಿಯಡ್ಕ ಅಬಕಾರಿ ನಿರೀಕ್ಷಕ ಪಿ.ಆರ್.ಜಿಷ್ಣು ಭಾಗವಹಿಸಿದ್ದರು. ಸ್ಕೈ ಬ್ಲೂ ಸ್ಥಾಪಕ ಸದಸ್ಯ ಮಜೀದ್ ಕಲ್ಕತ್ತಾ, ಕ್ಲಬ್ ಮಾಜಿ ಅಧ್ಯಕ್ಷ ಕಮರುದ್ದೀನ್ ಪಾಡಲಡ್ಕ,ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಪ್ರಸನ್ನ ಕುಮಾರಿ ಮಾತನಾಡಿದರು. ಪಾಲಿಟೀವ್ ಕೇರ್ ಕಾರ್ಯದರ್ಶಿ ಫಾರೂಕ್ ಪಿ.ಎಂ ಸ್ವಾಗತಿಸಿ, ಸ್ಕೈಬ್ಲೂ ಕ್ಲಬ್ ಕಾರ್ಯದರ್ಶಿ ಮುಜೀಬ್ ರಹಮಾನ್ ವಂದಿಸಿದರು.
0 Comments