ನೆಕ್ರಾಜೆ : ಚೆಂಗಳ ಪಂಚಾಯತಿನ ನಾಲ್ಕನೇ ವಾರ್ಡ್ ನೆಕ್ರಾಜೆ ಚಾಯಿಂದಡಿ ಎಂಬ ಪ್ರದೇಶದಲ್ಲಿ ಸುಮಾರು 50 ವರ್ಷಗಳ ಹಿಂದೆ ನಿರ್ಮಾಣಗೊಂಡ ಸಂಕವೊಂದು ಅತ್ಯಂತ ದುರಾವಸ್ಥೆಯಲ್ಲಿದೆ.
ಇದರ ಕಾಂಕ್ರೀಟ್ ಸಂಪೂರ್ಣ ಶಿಥಿಲಗೊಂಡು ಕಬ್ಬಿಣದ ಸರಳುಗಳು ತುಂಡಾಗಿ ಭೀಕರ ಅಪಾಯ ಮಟ್ಟವನ್ನು ತಲುಪಿದೆ. ಇದು ನೆಕ್ರಾಜೆ ಯಿಂದ ಮಾವಿನಕಟ್ಟೆ ಸಂಪರ್ಕಿಸಲು ಏಕೖಕ ಪ್ರಮುಖ ರಸ್ತೆ ಭಾಗವಾಗಿದೆ.ಇದರ ಮೂಲಕ ನಿತ್ಯ ಹಲವಾರು ವಿಧ್ಯಾರ್ಥಿಗಳು ಸೇರಿದಂತೆ ಗ್ರಾಮದ ಜನತೆ ಸಂಚರಿಸುತ್ತಿದ್ದಾರೆ. ಸಮೀಪವೇ ಗ್ರಾಮ ದೇವಸ್ಥಾನವಾದ ಗೋಪಾಲಕೃಷ್ಣ ಕ್ಷೇತ್ರಕ್ಕೂ ಹಲವಾರು ಮಂದಿ ಭಕ್ತರು ಈ ದಾರಿಯಲ್ಲೇ ಸಂಚರಿಸಬೇಕು.ಈ ಪ್ರದೇಶವು ಇದುವರೆಗೆ ಯಾವುದೇ ರೀತಿಯ ಅಬಿವೃದ್ಧಿ ಕಾರ್ಯಗಳು ನಡೆಸದೇ ಕಡೆಗಣಿಸಲಾಗಿದೆ.
ಈ ಬಗ್ಗೆ ಪಂಚಾಯತ್ ಆಡಳಿತ ಹಾಗೂ ವಾರ್ಡ್ ಸದಸ್ಯರ ಗಮನ ಹರಿಸಲು ರಮೇಶ್ ಮಾವಿನ ಕಟ್ಟೆ ಹಾಗೂ ದೇವಿಪ್ರಸಾದ್ ನೆಕ್ರಾಜೆ, ಮೋಹನ್ ಶೆಟ್ಟಿ ನೆಕ್ರಾಜೆ ಇವರ ನೇತೃತ್ವದಲ್ಲಿ ಒತ್ತಾಯಿಸಲಾಯಿತು. ಈ ಬಗ್ಗೆ ಚೆಂಗಳ ಪಂಚಾಯತ್ ಅಧ್ಯಕ್ಷರಿಗೆ ಲಿಖಿತ ರೂಪದಲ್ಲಿ ದೂರು ನೀಡಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಜನತೆಯ ಪರವಾಗಿ ರಮೇಶ್ ಮಾವಿನ ಕಟ್ಟೆ ಹಾಗೂ ದೇವಿಪ್ರಸಾದ್ ನೆಕ್ರಾಜೆ ಮನವಿ ನೀಡಿದರು.
0 Comments