ತಿರುವನಂತಪುರ: ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮ ಪತ್ರಿಕೆ ಹಿಂತೆಗೆತ ಇಂದು (ಸೋಮವಾರ) ಸಂಜೆ ಮೂರು ಗಂಟೆಯವರೆಗೆ ನೀಡಲಾಗಿದೆ. ನಾಮಪತ್ರ ಹಿಂತೆಗೆತದ ಬಳಿಕ ಚುನಾವಣಾಧಿಕಾರಿಯು ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸುತ್ತಾರೆ. ಅಭ್ಯರ್ಥಿಗಳ ಹೆಸರನ್ನು ಮಲಯಾಳಂ ವರ್ಣಮಾಲೆಯ ಕ್ರಮದಲ್ಲಿ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಈ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ವಿಳಾಸ ಮತ್ತು ಅನುಮೋದಿತ ಚಿಹ್ನೆ ಇರುತ್ತದೆ. ಸ್ಪರ್ಧಾಕಾಂಕ್ಷಿಗಳ ಪಟ್ಟಿಯನ್ನು ಆಯಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಸಂಬಂಧಿಸಿದ ಪಂಚಾಯತ್ ಹಾಗೂ ನಗರ ಸಭಾ ಕಚೇರಿಯಲ್ಲಿ ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

0 Comments