Ticker

6/recent/ticker-posts

Ad Code

ಆದರ್ಶ ನಗರದ ಆಯುರ್ವೇದ ವೈದ್ಯರ ಕುಟುಂಬದಿಂದ ಆಕರ್ಷಕ ಬಸ್ ತಂಗುದಾಣದ ಕೊಡುಗೆ

 

ಪುತ್ತೂರು:  ಪುತ್ತೂರು- ಉಪ್ಪಿನಂಗಡಿ ಮಾರ್ಗವಾಗಿ ತೆರಳುವ  ಆದರ್ಶ ನಗರದಲ್ಲಿ ಆಕರ್ಷಣೀಯ  ಬಸ್ ನಿಲ್ದಾಣವೊಂದು ತಲೆ ಎತ್ತಿ ನಿಂತಿದ್ದು ಎಲ್ಲರ ಗಮನ ಸೆಳೆಯುತ್ತಿದೆ.  ಆದರ್ಶ ನಗರದ ಆಯುರ್ವೇದ ವೈದ್ಯರ ಕುಟುಂಬವೊಂದು ಈ ಆಕರ್ಷಕ ಬಸ್ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿ ಕೊಡುಗೆಯಾಗಿಸಿದೆ.

ಸಾಮಾನ್ಯವಾಗಿ ಬಸ್ ನಿಲ್ದಾಣವೆಂದರೆ ಒಂದು ಮೇಲ್ಪಾವಣಿ, ಕುಳಿತುಕೊಳ್ಳಲು ಕಲ್ಲು ಹಾಸಿದ ಆಸನ ಬಿಟ್ಟರೆ ಬೇರೇನೂ ಇರೋದಿಲ್ಲ. ಆದರೆ ವಿಭಿನ್ನ ಶೈಲಿಯ ಜನಾಕರ್ಷಣೆಯ ಬಸ್ ನಿಲ್ದಾಣಗಳ ಸಾಲಿಗೆ ಆದರ್ಶ ನಗರದ ಈ ಬಸ್ ನಿಲ್ದಾಣವೂ ಸೇರುತ್ತದೆ. ಕಾಂಕ್ರೀಟ್ ಕಟ್ಟಡದ ಬದಲು ನೈಸರ್ಗಿಕವಾಗಿ ಸಿಗುವ ಕೆಂಪುಕಲ್ಲಿನಿಂದಲೇ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಇದಕ್ಕೆ ಹಚ್ಚಲಾಗಿರುವ ಬಣ್ಣವೂ ರಾಸಾಯನಿಕ ಮುಕ್ತವಾಗಿದ್ದು, ಪರಿಸರಸ್ನೇಹಿ ಬಸ್ ನಿಲ್ದಾಣವಾಗಿಯೂ ಇದು ರೂಪುಗೊಂಡಿದೆ.

ಬಸ್‌ ನಿಲ್ದಾಣದ ಸ್ವರೂಪ ಶಾಸ್ತ್ರೀಯವಾಗಿರಬೇಕು ಎನ್ನುವ ಕಾರಣಕ್ಕೆ ಕಟ್ಟಡದ ವಿನ್ಯಾಸವನ್ನು ಪಾರಂಪರಿಕ ಸ್ವರೂಪಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಿರ್ಮಾಣ ಮಾಡಿರುವುದು ಜನ ಮೆಚ್ಚುಗೆಗೆ ಪಾತ್ರವಾಗಿದೆ.

Post a Comment

0 Comments