Ticker

6/recent/ticker-posts

Ad Code

ವರ ನೀಡಿದ್ದ ಚಿನ್ನಾಭರಣ ಹಾಗೂ ದುಬಾರಿ ಉಡುಗೊರೆಗಳೊಂದಿಗೆ ಪ್ರಿಯಕರನ ಜೊತೆ ಪರಾರಿಯಾದ ವಧು

 

ಬಂಟ್ವಾಳ: ವಿವಾಹ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ವಧು ಪ್ರಿಯಕರನೊಂದಿಗೆ  ನಾಪತ್ತೆಯಾದ ಘಟನೆ ಬಿ.ಸಿ. ರೋಡಿನ ಪಲ್ಲಮಜಲಿನಲ್ಲಿ ನಡೆದಿದೆ. ಡಿಸೆಂಬರ್ 12ರಂದು ಶಾಸ್ತ್ರೋಕ್ತವಾಗಿ ನಿಕಾಹ್ ನಡೆಸಿ ಡಿಸೆಂಬರ್ 14 ರಂದು ಮಂಗಳೂರಿನ ತೊಕ್ಕೊಟ್ಟು ಯುನಿಟಿ ಹಾಲ್‌ನಲ್ಲಿ ಮನೆಯವರೆಲ್ಲರೂ ಅದ್ಧೂರಿ ಮದುವೆ ಸಮಾರಂಭ ಮತ್ತು ಔತಣಕೂಟದ   ಸಂಭ್ರಮದ ಸಿದ್ಧತೆಯಲ್ಲಿದ್ದಾಗಲೇ ಮದುಮಗಳು  ವರ ನೀಡಿದ್ದ ಐಪೋನ್ ಸಹಿತ ದುಬಾರಿ ಉಡುಗೊರೆಗಳನ್ನು ಹಿಡಿದುಕೊಂಡು ಪ್ರಿಯಕರನ ಜತೆ ಪರಾರಿಯಾದ ಘಟನೆ ನಡೆದಿದೆ. ವಿವಾಹದ ಸಂಭ್ರಮದಲ್ಲಿದ್ದ ಕುಟುಂಬವೊಂದು ಇದರಿಂದಾಗಿ ಆಘಾತಕ್ಕೊಳಗಾಗಿದೆ. ರವಿವಾರ ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ಮನೆಯವರೆಲ್ಲರೂ ನಿದ್ರೆಯಲ್ಲಿದ್ದಾಗ ಯುವತಿ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಈ ಕುರಿತು ವರನ ಕಡೆಯವರು ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments