Ticker

6/recent/ticker-posts

Ad Code

ಬೇಕಲದ ಪಳ್ಳಿಕೆರೆ ಬೀಚ್‌ ಫೆಸ್ಟ್ ನ ಗಾಯಕ ವೇಡನ್ ಕಾರ್ಯಕ್ರಮಕ್ಕೆ ನೂಕು ನುಗ್ಗಲು : ಆರು ಮಂದಿ ಆಸ್ಪತ್ರೆಗೆ ದಾಖಲು

 

ಕಾಞಂಗಾಡ್: ಬೇಕಲ್ ಬೀಚ್ ಉತ್ಸವದಲ್ಲಿ ಖ್ಯಾತ ರಾಪೆರ್ ಗಾಯಕ  ವೇಡನ್ ಅವರ ಸಂಗೀತ ಕಾರ್ಯಕ್ರಮದ ವೇಳೆ ಜನ ದಟ್ಟನೆಯಿಂದ ನೂಕು ನುಗ್ಗಲು ಉಂಟಾಗಿದ್ದು ಪರಿಸ್ಥಿತಿ ನಿಯಂತ್ರಣದ ವೇಳೆ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಬೇಕಲ್ ಬೀಚ್ ಉತ್ಸವ ನಡೆಯುತ್ತಿದೆ. ಸೋಮವಾರ ರಾತ್ರಿ 8 ಗಂಟೆಗೆ ವೇಡನ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಪ್ರಾರಂಭವಾಯಿತು. ಈ ವೇಳೆಗೆ ಅನೇಕ ಜನರು ಇಲ್ಲಿಗೆ ಆಗಮಿಸಿದ್ದರು. ಟಿಕೆಟ್ ಖರೀದಿಸದವರೂ ಸಹ ಕಾರ್ಯಕ್ರಮ ನೋಡಲು  ಪ್ರಯತ್ನಿಸುವಾಗ   ಜನಸಮೂಹ ವೇದಿಕೆಯ ಮುಂಭಾಗಕ್ಕೆ ಧಾವಿಸಿತು, ಇದರಿಂದಾಗಿ ಕಾಲ್ತುಳಿತ ಉಂಟಾಯಿತು. ಮಹಿಳೆಯರು ಮತ್ತು ಮಕ್ಕಳು ಬಿದ್ದು ತುಳಿತಕ್ಕೊಳಗಾಗಿ  ಗಾಯಗೊಂಡರು. ಸ್ಥಳದಲ್ಲಿದ್ದ ಕನಿಷ್ಠ  ಪೊಲೀಸರಿಂದ ಮತ್ತು ಸ್ವಯಂಸೇವಕರಿಂದ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರಾತ್ರಿ 10 ಗಂಟೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.ಇದರಂತೆ ಆಸ್ಪತ್ರೆಗೆ ದಾಖಲಿಸಿದವರನ್ನು ಚಿಕಿತ್ಸೆಯ ಬಳಿಕ ಮನೆಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಯಾವುದೇ ಗಂಭೀರ ಪರಿಣಾಮಗಳಾಗದಿದ್ದು ವದಂತಿಗಳನ್ನು ಹಬ್ಬಿಸದಂತೆ ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿ ಮನವಿ ಮಾಡಿದ್ದಾರೆ.

Post a Comment

0 Comments