ಬಂಟ್ವಾಳ : ಪೊಲೀಸ್ ಸಿಬ್ಬಂದಿಯೊಬ್ಬರು ಚಲಾಯಿಸುತ್ತಿದ್ದ ನ್ಯಾನೋ ಕಾರು ಮತ್ತು ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿದ್ದು, ಬೈಕ್ ಸವಾರ ತೀವ್ರ ಗಾಯಗೊಂಡು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಕಟ್ಟೆಮನೆ ಎಂಬಲ್ಲಿ ನಡೆದಿದೆ. ಮಾರ್ನಬೈಲು ನಿವಾಸಿ ಇಮ್ರಾನ್ ಮೊಹಮ್ಮದ್ ತಾಹ ಎಂಬವರು ಮೃತ ವ್ಯಕ್ತಿ. ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು ಕಾರನ್ನು ಮಂಗಳೂರಿನ ಡಿಸಿಆರ್ 2 ವಿಭಾಗದಲ್ಲಿ ಕರ್ತವ್ಯದಲ್ಲಿರುವ ಪ್ರಸನ್ನ ಎಂಬವರು ಚಲಾಯಿಸುತ್ತಿದ್ದರು. ಘಟನೆ ಸಂದರ್ಭದಲ್ಲಿ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಕಾರಿನ ಎದುರಿನ ಗ್ಲಾಸಿಗೆ ಬಿದ್ದು ಹೊರಗಡೆ ಎಸೆಯಲ್ಪಟ್ಟಿದ್ದಾನೆ. ಈ ವೇಳೆ ಕಾಲು ತುಂಡಾಗಿದ್ದು, ತಲೆಗೆ ತೀವ್ರ ಏಟು ಬಿದ್ದು ಮೃತಪಟ್ಟಿದ್ದಾರೆ. ಘಟನೆ ಸಂದರ್ಭದಲ್ಲಿ ಕಾರು ಚಲಾಯಿಸುತ್ತಿದ್ದ ಪೊಲೀಸ್ ಪೇದೆ ಪ್ರಸನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ, ಸ್ಥಳದಲ್ಲಿದ್ದವರು ಕಾರಿನ ಒಳಗಡೆ ಪರಿಶೋಧಿಸಿದಾಗ ಶೇಂದಿಯನ್ನು ತುಂಬಿಸಿದ್ದ ಬಾಟಲಿ ಇರುವುದನ್ನು ಪತ್ತೆ ಮಾಡಿದ್ದು, ಕಾರಿನ ಒಳಗೆ ಪೊಲೀಸರು ಬಳಸುವ ಟೋಪಿ ಕಂಡು ಬಂದಿದ್ದು, ಇದು ಯಾರದ್ದೋ ಪೊಲೀಸರದ್ದೇ ಕಾರು ಎನ್ನುವ ಗುಮಾನಿಯಲ್ಲಿ ಕುಡಿದು ವಾಹನ ಚಲಾಯಿಸಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದು ವಿಡಿಯೋ ಮಾಡಿ ಜಾಲತಾಣದಲ್ಲಿ ಹಾಕಿದ್ದಾರೆ.

0 Comments