ಉಪ್ಪಳ ; ಶ್ರೀ ನಿತ್ಯಾನಂದಯೋಗಾಶ್ರಮ ಕೊಂಡೆವೂರು ಮತ್ತು ಅಂಬೇಡ್ಕರ್ ಅಭಿಮಾನಿಗಳು ಮಂಗಲ್ಪಾಡಿ ಇವರ ಜಂಟಿ ಆಶ್ರಯದಲ್ಲಿ ಡಿ.17ಕ್ಕೆ ಸಂಜೆ 7.30 ಗಂಟೆಯಿಂದ ಕೊಂಡೆವೂರಿನಲ್ಲಿ ಅಡ್ಡಂಡ ಕಾರ್ಯಪ್ಪ ಕೊಡಗು ಇವರು ರಚಿಸಿ ನಿರ್ದೇಶಿಸಿದ 'ನಿಜ ಮಹಾತ್ಮ ಬಾಬಾ ಸಾಹೇಬ' ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ವೈಚಾರಿಕ ತತ್ವ ಸಿದ್ಧಾಂತಗಳ ಸೃಷ್ಟ ಚಿತ್ರಣವನ್ನು ನೀಡಲಿರುವ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ ಅಂಬೇಡ್ಕರ್ ರವರ ಕಥೆಯನ್ನಾಧರಿಸಿದ ಐತಿಹಾಸಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

0 Comments