ಕಾಸರಗೋಡು: ನಗರಸಭೆಯ ಬೀರಂತ ಬೈಲ್ ನ ಕೊಲ್ಕೆಬೈಲು ಎಂಬಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮನೆಯೊಂದು ಸುಟ್ಟು ಭಸ್ಮವಾಗಿದೆ. ಚಪ್ಪರ ಮನೆ ದಿವಂಗತ ಗಣಪತಿ ಆಚಾರಿ ಅವರ ಪತ್ನಿ ಪುಷ್ಪಾ ಅವರಿಗೆ ಸೇರಿದ ಅನುಗ್ರಹ ನಿವಾಸ ಈ ರೀತಿ ಬೆಂಕಿಗೆ ಆಹುತಿಯಾಗಿರುವುದಾಗಿದೆ. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ. ಶಾರ್ಟ್ ಸರ್ಕೂಟ್ ನಿಂದ ಬೆಂಕಿ ಆಕಸ್ಮಿಕ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಸುಟ್ಟುಹೋಗಿದ್ದು ಮನೆಯವರು ಹೊರಗೊಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಮನೆ ಸಂಫೂರ್ಣ ಸುಟ್ಟುಹೋದ ಕಾರಣ ಮಕ್ಕಳು ಮಹಿಳೆಯರು ಇರುವ ಈ ಮನೆಯವರಿಗೆ ಉಳಿದುಕೊಳ್ಳಲು ನೆಲೆ ಇಲ್ಲದಂತಾಗಿದೆ. ಸಹೃದಯರ ಅಥವ ಸಂಘ ಸಂಸ್ಥೆಗಳ ನೆರವು ಈ ಬಡ ಕುಟುಂಬಕ್ಕೆ ಅಗತ್ಯವಾಗಿದೆ.

0 Comments