Ticker

6/recent/ticker-posts

Ad Code

ಕೊಂಡೆವೂರಿನಲ್ಲಿ ಜನ ಮನ ರಂಜಿಸಿದ ನಿಜ ಮಹಾತ್ಮ ಬಾಬಾ ಸಾಹೇಬ ನಾಟಕ ಯಶಸ್ವಿ ಪ್ರದರ್ಶನ

 

ಉಪ್ಪಳ : ಸಂವಿಧಾನ ಶಿಲ್ಪಿ ಡಾI ಭೀಮ್ ರಾವ್ ಅಂಬೇಡ್ಕರ್ ರವರ  ತತ್ವ ಆದರ್ಶಗಳನ್ನು  ಸಾರ್ವಜನಿಕರ ಮುಂದೆ ತೆರೆದಿಟ್ಟ  ಅಡ್ಡಂಡ ಕಾರ್ಯಪ್ಪರು ರಚಿಸಿ ನಿರ್ದೇಶಿಸಿದ ನಿಜ ಮಹಾತ್ಮ ಬಾಬಾ ಸಾಹೇಬ ಎಂಬ ನಾಟಕವು  ಕೊಂಡೆವೂರು ಗಾಯತ್ರಿ ಕಲಾ  ಮಂಟಪದಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.  ಸುಮಾರು ಎರಡೂವರೆ ತಾಸು ಕೂತೂಹಲದಿಂದ ಕಲಾಭಿಮಾನಿಗಳನ್ನು  ಮಂತ್ರ ಮುಗ್ದರನ್ನಾಗಿಸಿದ ಅಪೂರ್ವ ನಾಟಕ ಇದಾಗಿದೆ. ಕಲೆಯಲ್ಲಿ ಶ್ರೀಮಂತರಾದ ನಟನಾ ಚಾತುರ್ಯದ ಕಲಾಭಿಮಾನಿಗಳ ಸಂಭಾಷಣೆಯ ಶೈಲಿ, ನಾಟಕದ ವಸ್ತು, ಧ್ವನಿ, ಬೆಳಕು, ವಿನ್ಯಾಸ ಎಲ್ಲವೂ ಒಂದಕ್ಕಿಂತ ಇನ್ನೊಂದು ಮಿಗಿಲೆನಿಸುವಂತಿತ್ತು. ನಾಟಕ ರಚಿಸಿ, ನಿರ್ದೇಶಿಸಿದ  ಅಡ್ಡಂಡ ಕಾರ್ಯಪ್ಪರನ್ನು ಸ್ವಾಮೀಜಿಯವರು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತು ಸದಸ್ಯರಾಗಿ ಬದಿಯಡ್ಕದಿಂದ ಆಯ್ಕೆಯಾದ ಬಾ.ಜ. ಪ.ದ ಜಿಲ್ಲಾ ಸದಸ್ಯರಾದ ರಾಮಪ್ಪ ಮಂಜೇಶ್ವರರನ್ನು  ಕೊಂಡೆವೂರು ಶ್ರೀಗಳು ಶಾಲು ಹೊದಿಸಿ ಗೌರವಿಸಿದರು. ನ್ಯಾಯವಾದಿ ಶ್ರೀ ಗಂಗಾಧರ ಕೊಂಡೆವೂರು ಸ್ವಾಗತಿಸಿ, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು.



Post a Comment

0 Comments