Ticker

6/recent/ticker-posts

Ad Code

ಜಪಾನ್‌ನಲ್ಲಿ ಪ್ರಬಲ ಭೂಕಂಪ ; ಸುನಾಮಿ : 480 ಜನರ ರಕ್ಷಣೆ


ಸೋಮವಾರ ತಡರಾತ್ರಿ ಉತ್ತರ ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೆಸಿಫಿಕ್ ಕರಾವಳಿ ಭಾಗಗಳಲ್ಲಿ 70 ಸೆಂಟಿಮೀಟರ್ (28 ಇಂಚು)ವರೆಗೆ ಸುನಾಮಿ ಅಲೆಗಳು ಉಂಟಾಗಿವೆ.

ಅಮೋರಿ ಕರಾವಳಿಯಲ್ಲಿ ತಡರಾತ್ರಿ ಭೂಕಂಪ ಮತ್ತು ಸುನಾಮಿ ನಂತರ ಜಪಾನ್‌ನಲ್ಲಿ ಸಾಕಷ್ಟು ಹಾನಿಯಾಗಿದೆ. ಹೊನ್ಶುವಿನ ಉತ್ತರ ತುದಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದ್ದು, ಹಲವಾರು ಕರಾವಳಿ ಪಟ್ಟಣಗಳಿಗೆ ಸಣ್ಣ ಸುನಾಮಿ ಅಲೆಗಳು ಬಡಿದಿವೆ.

ಅಮೋರಿಯ ದಕ್ಷಿಣದಲ್ಲಿರುವ ಇವಾಟೆಯಲ್ಲಿರುವ ಕುಜಿ ಬಂದರನ್ನು 70 ಸೆಂ.ಮೀಗಳಷ್ಟು ಅಲೆಗಳು ತಲುಪಿದವು. ಇತರ ಕೆಲವೆಡೆ  50 ಸೆಂ.ಮೀಗಳಷ್ಟು ಎತ್ತರದ ಅಲೆಗಳನ್ನು ಸೃಷ್ಟಿಸಿವೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭೂಕಂಪ ಪೀಡಿತ ಸುಮಾರು 800 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶಿನ್ ಕನ್ಸೆನ್ ಸೇವೆಗಳು ಮತ್ತು ಕೆಲವು ಸ್ಥಳೀಯ ರೈಲುಗಳನ್ನು ನಿಲ್ಲಿಸಲಾಗಿದೆ. ಮುಂದಿನ ಸೂಚನೆಯವರೆಗೆ ಜನರು ತಾವಿರುವ ಸ್ಥಳವನ್ನು ಬಿಟ್ಟು ಎಲ್ಲೂ ಹೋಗದಂತೆ ಜನರಿಗೆ ಮುಖ್ಯ ಸಂಪುಟ ಕಾರ್ಯದರ್ಶಿ ಮಿನೋರು ಕಿಹರಾ ಎಚ್ಚರಿಸಿದ್ದಾರೆ. 

ಹಚಿನೋಹೆ ವಾಯುನೆಲೆಯಲ್ಲಿ ಸುಮಾರು 480 ಜನರು ಆಶ್ರಯ ಪಡೆದಿದ್ದಾರೆ. ರಕ್ಷಣಾ ಸಚಿವಾಲಯವು ಹಾನಿಯನ್ನು ಸಮೀಕ್ಷೆ ಮಾಡಲು 18 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ ಎಂದು ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ತಿಳಿಸಿದ್ದಾರೆ.

Post a Comment

0 Comments