ಕಾಸರಗೋಡು : ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳು ಸಾಮಾನ್ಯವಾಗಿ ಶಾಂತಿಯುತವಾಗಿದ್ದರೂ, ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಹಿಂಸಾಚಾರದ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಮಂಗಲ್ಪಾಡಿ ಪಂಚಾಯತ್‌ನ ಎರಡನೇ ವಾರ್ಡ್ ಬೂತ್ ಮುಂದೆ ಸಾಂದರ್ಭಿಕ ಘರ್ಷಣೆ ನಡೆದಿತ್ತು. ಮತದಾರನೊಬ್ಬ ಪ್ರವೇಶಿಸಿದಾಗ ಮುಸ್ಲಿಂ ಲೀಗ್ ಮತ್ತು ಎಡರಂಗದ ಬೂತ್ ಏಜೆಂಟ್‌ಗಳ ನಡುವೆ ವಾಗ್ವಾದ ನಡೆಯಿತು. ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಅದನ್ನು ಪರಿಹರಿಸಲಾಗಿದೆ. ಘರ್ಷಣೆಯನ್ನು ಸೃಷ್ಟಿಸಲು ಪ್ರಯತ್ನಿಸಿದವರನ್ನು ಪೊಲೀಸರು ಓಡಿಸಿದರು. .
ಮೀಂಜ ಸಮೀಪದ ಕುಳೂರಿನ ಮತದಾನ ಕೇಂದ್ರದಲ್ಲಿ ಸಿಪಿಎಂ ನ ಕಾರ್ಯಕರ್ತರಿಂದ ಕಾಂಗ್ರೆಸ್ ನೇತಾರನ ಮೇಲೆ ಹಲ್ಲೆ ಯತ್ನ ನಡೆದಿತ್ತು. ಸಿಪಿಎಂ ನೇತಾರರ ಸಹಿತ 60 ಮಂದಿ ಕಾರ್ಯಕರ್ತರ ತಂಡ ಮಂಜೇಶ್ವರ ಪೋಲೀಸರ ಎದುರೇ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾಂಗ್ರೆಸ್ ನೇತಾರನ ಕಾರನ್ನು ಅಡ್ಡ ಗಟ್ಟಿ ಕಾರನ್ನು ಕೂಡ ಪುಡಿ ಪುಡಿ ಮಾಡಿದ್ದಾರೆ ಎಂದು ವರದಿಯಾಗಿದೆ.
ದೇಲಂಪಾಡಿ ಹಾಗೂ ಕುತ್ತಿಕೋಲ್ ಪಂಚಾಯತಿನ ಮತಗಟ್ಟೆ ಬಳಿ ಸಿಪಿಐಎಂ ಆಕ್ರಮಣ ನಡೆದಿರುವುದಾಗಿ ಆರೋಪವಿದೆ. ಇದೇ ಸಂದರ್ಭ ಎನ್ ಡಿ ಎ ಅಭ್ಯರ್ಥಿಗೆ ಬೆದರಿಕೆಯೊಡ್ಡಿದ ಪ್ರಕರಣವು ನಡೆದಿದೆ ಎನ್ನಲಾಗಿದೆ. ಘರ್ಷಣೆಯಲ್ಲಿ ಗಾಯಗೊಂಡ ಮೂವರು ಗಾಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಂಞಂಗಾಡಿನ ಪಿಲಿಕೋಡ್‌ನ 13 ನೇ ವಾರ್ಡ್‌ನಲ್ಲಿ ಯುಡಿಎಫ್ ಬೂತ್ ಏಜೆಂಟ್‌ಗಳ ಮೇಲೆ ಹಲ್ಲೆ ನಡೆದಿದೆ. ಯುಡಿಎಫ್ ಪಿಲಿಕೋಡ್ ಪಂಚಾಯತ್‌ನ ಅಧ್ಯಕ್ಷ ಮತ್ತು ಮುಸ್ಲಿಂ ಲೀಗ್ ತ್ರಿಕರಿಪುರ ಕ್ಷೇತ್ರದ ಕಾರ್ಯದರ್ಶಿ ನಿಶಾಮ್ ಪಟೇಲ್ ಅವರ ಮೇಲೆ ಬೂತ್‌ಗೆ ಪ್ರವೇಶಿಸಿದ ಡಿವೈಎಫ್‌ಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ತ್ರಿಕರಿಪುರದಲ್ಲಿಯೂ ಘರ್ಷಣೆ ನಡೆದ ಬಗ್ಗೆ ವರದಿಯಾಗಿದೆ. ಯುಡಿಎಫ್ ಕಾರ್ಯಕರ್ತನ ಮೇಲೆ ನಾಯಿ ಸೊಣಗು ಪುಡಿಯಿಂದ ಎರಚಿದ ಬಗ್ಗೆ ಘರ್ಷಣೆ ನಡೆದಿತ್ತು. ಕಳನಾಡ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಅವರನ್ನು ಓಡಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿತ್ತು ಎನ್ನಲಾಗಿದೆ.

0 Comments