Ticker

6/recent/ticker-posts

Ad Code

ಐಎನ್‌ಎಲ್-ಮುಸ್ಲಿಂ ಲೀಗ್ ಘರ್ಷಣೆ; ಎಂಟು ಜನರ ವಿರುದ್ಧ ಕೇಸು


 ಕಾಸರಗೋಡು : ನೀಲೇಶ್ವರ ಸಮೀಪದ ಕೊಟ್ಟಾಪುರದಲ್ಲಿ ಚುನಾವಣಾ ಪೋಸ್ಟರ್ ಅಂಟಿಸುವ ವಿಚಾರದಲ್ಲಿ ಐಎನ್‌ಎಲ್-ಮುಸ್ಲಿಂ ಲೀಗ್ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಒಂದು ಕಾರಿಗೂ ಹಾನಿಯಾಗಿದ್ದು  ಘಟನೆಯಲ್ಲಿ ಎಂಟು ಜನರ ವಿರುದ್ಧ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಶನಿವಾರ ರಾತ್ರಿ 11.30 ರ ಸುಮಾರಿಗೆ ಕೊಟ್ಟಾಪುರದಲ್ಲಿ ಘರ್ಷಣೆ ನಡೆದಿದೆ. ಕೊಟ್ಟಾಪುರದ ಮುಸ್ಲಿಂ ಲೀಗ್ ಕಾರ್ಯಕರ್ತ ಸಬೀರ್ ಮಂಜಿಲ್ ನ  ಮುತಾಲಿಬ್ ಅವರ ಪುತ್ರ ಮುಹಸ್ಸಿನ್ (17) ಮತ್ತು ಮುಹಮ್ಮದ್ ಕುಞಿ ಅವರ ಪುತ್ರ ಫಹಿಮಾ ಮುಹಮ್ಮದ್ (17) ಅವರ ದೂರಿನ ಮೇರೆಗೆ ಐಎನ್‌ಎಲ್‌ನ ಐವರು ಕಾರ್ಯಕರ್ತರ ವಿರುದ್ಧ ಮತ್ತು ಕೊಟ್ಟಾಪುರದ ರಜಿನಾ ಮಂಜಿಲಿಲ್‌ನ ಮೊಯ್ದು ಅವರ ಪುತ್ರ ಅಬ್ದುಲ್ ರಶೀದ್ (39) ಅವರ ದೂರಿನ ಮೇರೆಗೆ ಮೂವರು ಲೀಗ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Post a Comment

0 Comments