Ticker

6/recent/ticker-posts

Ad Code

ವ್ಯಕ್ತಿತ್ವ ನಾಶ ಮಾಡಲೆಂದೇ ಕೇಸ್ ನಲ್ಲಿ ಸಿಲುಕಿಸಲಾಗಿತ್ತು- ನಟ ದಿಲೀಪ್‌ ಮೊದಲ ಪ್ರತಿಕ್ರಿಯೆ

ತಿರುವನಂತಪುರ : ಸಮಾಜದಲ್ಲಿ ನನ್ನ ವ್ಯಕ್ತಿತ್ವ ಹಾಗೂ ಜೀವನ ನಾಶ ಮಾಡಲೆಂದೇ ನನ್ನ ವಿರುದ್ಧ ಸಂಚು ರೂಪಿಸಲಾಗಿತ್ತು ಎಂದು ನಟ ದಿಲೀಪ್‌ ನಟಿ ಅಪಹರಣ  ಪ್ರಕರಣದಲ್ಲಿ ನಿರ್ದೋಷಿ ಎಂ ನ್ಯಾಯಾಲಯದ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ್ದಾರೆ. ಈ ಕೇಸಿನಲ್ಲಿ ಕ್ರಿಮಿನಲ್ ಗೂಢಾಲೋಚನೆಯಿದೆ, ಇದನ್ನು ತನಿಖೆ ಮಾಡಬೇಕು ಎಂದು ನಟಿ ಹಾಗೂ ದಿಲೀಪ್ ರ ಮೊದಲ ಪತ್ನಿ ಮಂಜು ವಾರಿಯರ್‌ ಹೇಳಿದ  ಬಳಿಕ ಸಂಚು ಶುರುವಾಯಿತು ಎಂದು ಹೇಳಿದರು. ಅಂದು ಇದ್ದ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಪೊಲೀಸರು ಸೇರಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದರು. ಇದಕ್ಕಾಗಿ ಪ್ರಮುಖ ಆರೋಪಿಯನ್ನೂ, ಸಹ ಆರೋಪಿಗಳನ್ನೂ ಪೊಲೀಸರು ಹಿಡಿದರು. ಪೊಲೀಸರು ಕೆಲ ಮಾಧ್ಯಮಗಳ ಜೊತೆ ಸೇರಿ ಸುಳ್ಳು ಕತೆ ಸೃಷ್ಟಿಸಿದರು ಎಂದು ದೂರಿದರು. ಆ ಕತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿದರು. ಪೊಲೀಸರ ಕಟ್ಟುಕತೆ ಬಯಲಾಗಿದೆ. ನನ್ನನ್ನು ಈ ಕೇಸಿನಲ್ಲಿ  ಆರೋಪಿಯಾಗಿಸಿದ್ದೇ ನಿಜವಾದ ಸಂಚು. ಸಮಾಜದಲ್ಲಿ ನನ್ನ ವ್ಯಕ್ತಿತ್ವ ಹಾಗೂ ಜೀವನ ನಾಶಮಾಡಲೆಂದೇ ಹೀಗೆ ಮಾಡಿದರು. ಜೊತೆಯಾಗಿ ನಿಂತ ಸ್ನೇಹಿತರಿಗೆ, ಕುಟುಂಬ ಸದಸ್ಯರಿಗೆ, ನನಗಾಗಿ ಪ್ರಾರ್ಥಿಸಿದವರಿಗೆ ಧನ್ಯವಾದ. ವಕೀಲ ರಾಮನ್ ಪಿಳ್ಳೈ ಗೂ ಧನ್ಯವಾದ ಎಂದು ತಿಳಿಸಿದರು.

ನಟಿ ಮಂಜು ವಾರಿಯರ್‌ ಮತ್ತು ದಿಲೀಪ್‌ ಪ್ರೀತಿಸಿ 1998 ರಲ್ಲಿ ಮದುವೆಯಾಗಿದ್ದರು. 2015 ಜನವರಿಯಲ್ಲಿ ಈ  ದಂಪತಿಗಳು ವಿಚ್ಛೇದನ ಪಡೆದಿದ್ದರು

Post a Comment

0 Comments