ತಿರುವನಂತಪುರ : ರಾಜ್ಯದಲ್ಲಿ ಸೋಮವಾರ ಚಿನ್ನದ ಬೆಲೆಯಲ್ಲಿ ಏರಿಕೆ ಉಂಟಾಗಿದೆ. ಪ್ರತಿ ಗ್ರಾಂಗೆ 25 ರೂ. ಏರಿಕೆ ದಾಖಲಾಗಿದೆ. ಒಂದು ಗ್ರಾಂ ಬೆಲೆ 11,930 ರೂ.ಗಳಿಂದ 11,955 ರೂ.ಗಳಿಗೆ ಏರಿಕೆಯಾಗಿದೆ. ಒಂದು ಪವನ್ ನ ಬೆಲೆ 200 ರೂ.ಏರಿಕೆಯಾಗಿ 95,640 ರೂ ಆಗಿದೆ.
ಶುಕ್ರವಾರ ಕೇರಳದಲ್ಲಿ ಚಿನ್ನದ ಬೆಲೆ ಕುಸಿದಿತ್ತು. ಪ್ರತಿ ಗ್ರಾಂಗೆ 50 ರೂ.ಗಳ ಇಳಿಕೆಯಾಗಿ ದರ 11,930 ರೂ ಆಗಿತ್ತು. ಪವನ್ ನ ಬೆಲೆ 400 ರೂ.ಗಳಷ್ಟು ಇಳಿಕೆಯಾಗಿತ್ತು. ಒಂದು ಪವನ್ ನ ಬೆಲೆ 95,440 ರೂ.ಗಳಿಗೆ ಇಳಿಕೆಯಾಗಿತ್ತು. 18 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 20 ರೂ.ಇಳಿಕೆಯಾಗಿ 9830 ರೂ.ಯಾಗಿತ್ತು. 14 ಕ್ಯಾರೆಟ್ ಬೆಲೆಯೂ ಗ್ರಾಂಗೆ 20 ರೂ.ಗಳಷ್ಟು ಇಳಿಕೆಯಾಗಿ 7660 ರೂ ಆಗಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಹೆಚ್ಚಾಗಿದೆ. ಸ್ಪಾಟ್ ಚಿನ್ನದ ಬೆಲೆ ಶೇಕಡಾ 0.3ರಷ್ಟು ಏರಿಕೆಯಾಗಿದೆ.

0 Comments