ಮಾನ್ಯ : ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕಂಕೂಡ್ಲುನಲ್ಲಿ ತೆಂಕು ಅಂಗಣಕ್ಕೆ ಶಾಶ್ವತ ಚಪ್ಪರದ ಲೋಕಾರ್ಪಣೆ ನಡೆಯಿತು. ಕೆಲಸವು ಪೂರ್ಣಗೊಂಡು ಜಾತ್ರಾ ಮಹೋತ್ಸವದ ಮುನ್ನಾ ದಿನ ಶುದ್ದಿಕಲಶವು ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಬೆಳಿಗ್ಗೆ ಗಣಪತಿ ಹವನ, ಸುಬ್ರಮಣ್ಯ ಸ್ವಾಮಿಗೆ ಕಲಶ ಅಭಿಷೇಕ, ಶುದ್ಧಿ ಸಂಪ್ರೊಷಣೆ, ಉಪದೇವತೆಗಳಿಗೆ ಕಲಶ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಎಲ್ಲಾ ಸಮಿತಿಯವರು ಮತ್ತು ನಾಡಿನ ಭಕ್ತರು ಪಾಲ್ಗೊಂಡರು.

0 Comments