Ticker

6/recent/ticker-posts

Ad Code

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನಕ್ಕೆ ಧ.ಗ್ರಾ.ಯೋಜನೆ ಸದಸ್ಯರ ಭೇಟಿ


ಕಾಸರಗೋಡು : ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜೇಶ್ವರ ತಾಲೂಕಿನ ಪೆರ್ಲ ವಲಯದ ಕಾರ್ಯಕರ್ತರು ಜಿಲ್ಲೆಯ ವಿವಿದೆಡೆಗೆ ಕೃಷಿ ಅದ್ಯಯನ ಪ್ರವಾಸ ಕೈಗೊಂಡರು. ಇದರಂತೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನಕ್ಕೆ ಬೇಟಿ ನೀಡಿದ್ದು, ಯಕ್ಷಗಾನದ ಅಧ್ಯಯನ‌ ಕೇಂದ್ರದಲ್ಲಿ ಪೂರ್ತಿ ಯಕ್ಷಗಾನದ ಅಳ ಅರಿವನ್ನು ವೀಕ್ಷಿಸಿ ತೃಪ್ತರಾದರು.ಧರ್ಮಸ್ಥಳ ಮೇಳದ ಯಕ್ಷಗಾನ ಭಾಗವತ ರಾಮಕೃಷ್ಣ ಮಯ್ಯ ದಂಪತಿಗಳು ಸಿರಿಬಾಗಿಲು ಪ್ರತಿಷ್ಠಾನ ದ ಬಗ್ಗೆ ಹಾಗು ಕೃಷಿಯ ಬಗ್ಗೆ ಮಾಹಿತಿ ನೀಡಿದರು.ಇವರ ತೋಟದಲ್ಲಿದ್ದ ನೇಂದ್ರ ಬಾಳೆ ಕೃಷಿ ಯನ್ನು ಅವಲೋಕಿಸಿದರು. ಧ.ಗ್ರಾ.ಯೋಜನೆಯ ಮೇಲ್ವಿಚಾರಕಿ  ಪ್ರಿಯಾ ಹಾಗೂ ಸೇವಾ ಪ್ರತಿನಿಧಿಗಳು,ಜನ ಜಾಗೃತಿ ವೇದಿಕೆ, ಪ್ರಗತಿ ಬಂಧು ಸದಸ್ಯರು ಉಪಸ್ಥಿತರಿದ್ದರು.



Post a Comment

0 Comments