Ticker

6/recent/ticker-posts

Ad Code

ಬೈಕ್ ಸಹಿತ ಯುವಕ ಸಜೀವ ದಹನ : ಪ್ರಕರಣದಲ್ಲಿ ನಿಗೂಢತೆ


 ನಂಜನಗೂಡು : ಬೈಕ್ ಸಹಿತ ಯುವಕನೋರ್ವ ಸಜೀವ ದಹನವಾದ ಪ್ರಕರಣ ನಂಜನಗೂಡಿನಲ್ಲಿ ನಡೆದಿದ್ದು ಘಟನೆ ನಿಗೂಡತೆ ಸೃಷ್ಠಿಸಿದೆ. ರಾಂಪುರ ನಿವಾಸಿ ಆದಿತ್ಯ(24) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ವೇಳೆ ನಂಜನಗೂಡಿನಿಂದ ಕೊರಹುಂಡಿಗೆ ತೆರಳುವ ಮಾರ್ಗದ ಹುಲ್ಲಹಳ್ಳಿ ಬಳಿ  ಯುವಕನೋರ್ವ ಬೈಕ್ ನ ಬೆಂಕಿ ಜ್ವಾಲೆಗಳ ಮಧ್ಯೆ ಓಡಿ ಬಂದು ಬಿದ್ದಿದ್ದು ಕೆಲವೇ ಕ್ಷಣಗಳಲ್ಲಿ ಯುವಕನ ದೇಹ ಸುಟ್ಟುಹೋಗಿದೆ. ಬೈಕ್ ಸಹ ಸುಟ್ಟು ಕರುಕಲಾಗಿದೆ. ಇದನ್ನ ಗಮನಿಸಿದ ಸ್ಥಳೀಯರು ನೆರವಿಗೆ  ಧಾವಿಸಿದರಾದ್ರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಇದ್ದಕ್ಕಿದ್ದಂತೆ ನಡು ರಸ್ತೆಯಲ್ಲಿ ಬೆಂಕಿ ಅನಾಹುತ ಸೃಷ್ಟಿಯಾದ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಾ ವ್ಯಕ್ತವಾಗಿದ್ದು  ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Post a Comment

0 Comments