Ticker

6/recent/ticker-posts

Ad Code

ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಕೇರಳ ಮೂಲದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್


ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಾಲ್ವರನ್ನು ಹತ್ಯೆಗೈದಿದ್ದ ಕೇರಳ ಮೂಲದ ಅಪರಾಧಿಗೆ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ ಆರೋಪಿಗೆ ವಿರಾಜಪೇಟೆ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಕೇರಳ ಮೂಲದ ಗಿರೀಶ್ ಎಂಬಾತನಿಗೆ ಈ ಮರಣದಂಡನೆ ವಿಧಿಸಿದೆ.  2024 ರಲ್ಲಿ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಕೊಳತೋಡು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೇರಳ ಮೂಲದ ಗಿರೀಶ್ (37) ಬರ್ಬರವಾಗಿ ಹತ್ಯೆ ಮಾಡಿದ್ದ. ಮೃತಪಟ್ಟವರನ್ನ ನಾಗಿ (35), ಆಕೆಯ ಮಗಳು ಕಾವೇರಿ (7) ಹಾಗೂ ನಾಗಿಯ ಅಜ್ಜ-ಅಜ್ಜಿ ಕರಿಯ (75) ಮತ್ತು ಗೌರಿ (70) ಎಂದು ಗುರುತಿಸಲಾಗಿತ್ತು. ಆರೋಪಿ ಗಿರೀಶ್ ಕತ್ತಿಯಿಂದ ನಾಲ್ವರನ್ನೂ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ. ಪೊನ್ನಂಪೇಟೆ ಠಾಣೆ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಆರೋಪಿ ಗಿರೀಶ್‌ನನ್ನ ಬಂಧಿಸಿದ್ದರು. ಈ  ಪ್ರಕರಣವನ್ನು ಹಿರಿಯ ವಕೀಲರಾದ ಯಾಸೀನ್ ಅವರು ಸರಕಾರ  ಪರವಾಗಿ ವಾದ ಮಂಡಿಸಿದ್ದರು. ಎಲ್ಲಾ ಸಾಕ್ಷ್ಯ ಮತ್ತು ವಾದ-ಪ್ರತಿವಾದ ಪರಿಶೀಲಿಸಿದ ಬಳಿಕ ವಿರಾಜಪೇಟೆ ಸೆಷನ್ಸ್ ನ್ಯಾಯಾಲಯವು, ಆರೋಪಿ ಗಿರೀಶ್‌ನ ಅಪರಾಧವು ಗಂಭೀರ ಸ್ವರೂಪದ್ದು ಎಂದು ಪರಿಗಣಿಸಿ, ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದು ಕೊಡಗಿನ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಯ ಮರಣದಂಡನೆಯ ತೀರ್ಪಾಗಿದೆ.

Post a Comment

0 Comments