ಕಾಸರಗೋಡು : ಏಳು ಜಿಲ್ಲೆಗಳಲ್ಲಿ ನಡೆಯುತ್ತಿರುವ ತ್ರಿಸ್ತರ ಪಂಚಾಯತು ಚುನಾವಣೆಯ ಮತದಾನದಲ್ಲಿ ಆರಂಭದಿಂದ ಇದುವರೆಗಿನ ಐದು ತಾಸಿನಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದ್ದು ಕಾಸರಗೋಡು ಜಿಲ್ಲೆಯಲ್ಲಾಗಿದೆ. ಇದೀಗ ಮಧ್ಯಾಹ್ನ 12 ಗಂಟೆಯವರೆಗೆ 3,75,450 ಮಂದಿ ಮತದಾನ ಮಾಡಿದರು. 1,81,928 ಪುರುಷ ಮತದಾರರು ಮತ್ತು 1,93,521 ಮಹಿಳಾ ಮತದಾರರು ನೋಂದಾಯಿತ ಮತದಾರರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದಾರೆ. 41.92 ಶೇಕಡಾದಷ್ಟು ಮತದಾನ ದಾಖಲಾಗಿದೆ. ಜಿಲ್ಲೆಯಲ್ಲು ಅತೀ ಹೆಚ್ಚು ಮತದಾನ ನೀಲೇಶ್ವರಂನಲ್ಲಾಗಿದೆ. ಕಣ್ಣೂರಿನಲ್ಲಿ ಕನಿಷ್ಠ ಮತದಾನ ದಾಖಲಾಗಿದೆ. ಮತದಾನ ಯಂತ್ರ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ನಂತರ ಕಣ್ಣೂರಿನಲ್ಲಿ ಮತದಾನ ಕಡಿಮೆ ದಾಖಲಾಗಿದೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ಮುಂದುವರಿಯುತ್ತದೆ. ಮತ ಎಣಿಕೆ ಡಿ.13 ಶನಿವಾರ ನಡೆಯಲಿದೆ.

0 Comments