ಕುಂಬಳೆ ; ಉಪ್ಪಳ-ಮಂಜೇಶ್ವರ ರೈಲು ನಿಲ್ದಾಣಗಳ ನಡುವಿನ 287(ಇ) ಲೆವೆಲ್ ಕ್ರಾಸಿಂಗ್ ನ ಮುಟ್ಡಂ ರೈಲ್ವೆ ಕ್ರಾಸ್ ಅನ್ನು ಡಿ. 15 ರಂದು ಬೆಳಿಗ್ಗೆ 8 ಗಂಟೆಯಿಂದ ಡಿ.16 ಸಂಜೆ 6 ಗಂಟೆಯವರೆಗೆ ಮುಚ್ಚಲಾಗುವುದು ಎಂದು ಮಂಗಳೂರು ಸಹಾಯಕ ವಿಭಾಗೀಯ ಎಂಜಿನಿಯರ್ ತಿಳಿಸಿದ್ದಾರೆ. ತುರ್ತು ಕೆಲಸ ಕಾರ್ಯಗಳ ನಿರ್ವಹಣೆಗಾಗಿ ರೈಲ್ವೆ ಕ್ರಾಸಿಂಗ್ ಅನ್ನು ಮುಚ್ಚಲಾಗಿದೆ. ಇದಕ್ಕೆ ಬದಲಾಗಿ, ಪ್ರಯಾಣಿಕರು ಈ ದಿನಗಳಲ್ಲಿ ಉಪ್ಪಳ ರೈಲ್ವೆ ಗೇಟ್ ಮೂಲಕ ಪ್ರಯಾಣಿಸಬಹುದು ಎಂದು ತಿಳಿಸಲಾಗಿದೆ.

0 Comments