ಕಾಸರಗೋಡು : ಜಿಲ್ಲೆಯ ಅತ್ಯಂತ ಹಿರಿಯ ಮತದಾರ ವೆಂಕಪ್ಪ ನಾಯಕ್ ತನ್ನ 105 ನೇ ವಯಸ್ಸಿನಲ್ಲಿ ಮತ ಚಲಾಯಿಸಿದರು. ಕಾಸರಗೋಡಿನ ಅತ್ಯಂತ ಹಿರಿಯ ಮತದಾರ ಎಂಬ ಹಿನ್ನಲೆಯಲ್ಲಿ ಈ ಚುನಾವಣೆಯಲ್ಲಿ ತಮ್ಮ ಮತವನ್ನು ನೋಂದಾಯಿಸಿದ್ದಕ್ಕೆ ತುಂಬಾ ಸಂತೋಷಪಟ್ಟಿದ್ದಾರೆ. ಪನತ್ತಡಿ ಪಂಚಾಯತ್‌ನ ವಾರ್ಡ್ 3 ರ ಚಾಮುಂಡಿ ಕುನ್ನು ಶಾಲೆಗೆ ತಮ್ಮ ಕುಟುಂಬದೊಂದಿಗೆ ತಲುಪಿದ ನಂತರ ಅವರು ಮತ ಚಲಾಯಿಸಿದರು. ವಯೋ ಸಹಜ ಮಿತಿಗಳಿದ್ದರೂ, ಮತದಾನದ ಉತ್ಸಾಹ ಕಳೆಗುಂದದ ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋರೋನ ನೀತಿ ಸಂಹಿತೆಯಡಿ ಮನೆಯಿಂದಲೇ ಮತ ಚಲಾಯಿಸಿದ್ದರು.

0 Comments