ಕಾಸರಗೋಡು: ಚೆಂಗಳದಲ್ಲಿ ಚಪ್ಪರ ನಿರ್ಮಾಣ ಕಾರ್ಮಿಕನಾಗಿದ್ದ ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಪ್ಪಳ ಮೂಲದ ಹೊಳೆಗೌಡ ಅವರ ಪುತ್ರ ರುದ್ರಪ್ಪ ಗೌಡ (28) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಚೆಂಗಳದ ಪೊಡಿಪ್ಪಳಂನಲ್ಲಿರುವ ಅವರ ನಿವಾಸದ ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಸ್ಥಳೀಯರು ಅವರನ್ನು ತಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ದರು, ಆದರೆ ಸಾವು ಸಂಭವಿಸಿಯಾಗಿತ್ತು. ಮೃತನ ಸಹೋದ್ಯೋಗಿ ಪೊಡಿಪ್ಪಳಂನ ಸಿ. ಮುನೀರ್ ಅವರ ದೂರಿನ ಮೇರೆಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎಂದು ಮಾಹಿತಿ ಇದೆ.

0 Comments