ಕುಂಬಳೆ : ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯುಡಿಎಫ್ ಕಾರ್ಯದರ್ಶಿಯಾಗಿ ಕಾಂಗ್ರೆಸ್ ನಾಯಕ ಲಕ್ಷ್ಮಣ ಪ್ರಭು ಕುಂಬಳೆ ಅವರನ್ನು ಜಿಲ್ಲಾ ಕಾಂಗ್ರೆಸ್ ಘಟಕ ನೇಮಿಸಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಯುಡಿಎಫ್ ಪ್ರಚಂಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಗೆಲುವಿಗೆ ಇವರ ಕೆಲಸ ಕಾರ್ಯದ ಪ್ರಾಧಾನ್ಯತೆ ಪರಿಗಣಿಸಿ ಡಿಸಿಸಿ ಈ ನೇಮಕಾತಿ ನಡೆಸಿದೆ. ಕಾಂಗ್ರೆಸ್ ಕುಂಬಳೆ ಪಂ. ಘಟಕ ಉಪಾಧ್ಯಕ್ಷರಾಗಿ, ಐಎನ್ ಟಿಯುಸಿ ಮಂಡಲಾಧ್ಯಕ್ಷರಾಗಿ ಬ್ಲಾಕ್ ಕಾಂಗೈ ಉಪಾಧ್ಯಕ್ಷರಾಗಿ, ಬ್ಲಾಕ್ ಅಧ್ಯಕ್ಷರಾಗಿ ಈ ಹಿಂದೆ ವಿವಿಧ ಅಧಿಕಾರ ವಹಿಸಿಕೊಂಡಿರುವ ಅನುಭವದ ನೆಲೆಗಳಲ್ಲಿ ಅವರನ್ನು ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯುಡಿಎಫ್ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಮಂಜೇಶ್ವರ ಭಾಗದಲ್ಲಿ ಹೊಸ ತಲೆಮಾರಿನ ನಾಯಕರ ಮೂಲಕ ಪಕ್ಷದ ಬಲವರ್ಧನೆಗೆ ಕಾಂಗ್ರೆಸ್ ಗಮನ ಹರಿಸಿದೆ.
ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹಣಾಹಣಿಯ ಮೂಲಕ ಪುತ್ತಿಗೆ ಜಿ. ಪಂ. ಡಿವಿಜನ್ ನಲ್ಲಿ ಯುಡಿಎಫ್ ನ ಗೆಲುವು ಮತ್ತು ಕಾಸರಗೋಡು ಬ್ಲಾಕ್. ಪಂ. ನ ಮೊಗ್ರಾಲ್ ಡಿವಿಜನ್-2ನಲ್ಲಿ ಯುಡಿಎಫ್ ಗೆಲುವು ಗಳಿಸುವಲ್ಲಿ ಇವರ ಕೊಡುಗೆ ನಿರ್ಣಾಯಕವಾಗಿತ್ತು. ಇದನ್ನು ಪರಿಗಣಿಸಿ ಅವರಿಗೆ ನೂತನ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

0 Comments