Ticker

6/recent/ticker-posts

Ad Code

ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ಕ್ಷೇತ್ರದಲ್ಲಿ ವಿಶೇಷ ದೀಪೋತ್ಸವದೊಂದಿಗೆ ಧನುರ್ಮಾಸ ಪೂಜೆ ಸಂಪನ್ನ.

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ಕಳೆದ ಡಿಸೆಂಬರ್ 16 ರಿಂದ ಆರಂಭಗೊಂಡ ಧನುರ್ಮಾಸ ಪೂಜಾ ಮಹೋತ್ಸವ ಇಂದು  ಮಕರ ಸಂಕ್ರಮಣ ದಿನದಂಗವಾಗಿ ಮುಂಜಾನೆ ವಿಶೇಷ ದೀಪೋತ್ಸವದೊಂದಿಗೆ ಶ್ರೀ ಕಾಳಿಕಾ ಪರಮೇಶ್ವರೀ ದೇವಿಗೆ ಹಾಗೂ ಶ್ರೀ ಮಹಾಗಣಪತಿ, ಶ್ರೀ ವಿಶ್ವಕರ್ಮ ದೇವರಿಗೆ ಪೂಜೆ ನೆರವೇರುವುದರೊಂದಿಗೆ ಸಮಾಪ್ತಿಗೊಂಡಿತು. ಮುಂಜಾನೆ 3 ಗಂಟೆಯಿಂದ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಿತು.
 ಬಳಿಕ  ಉಳಿಯತ್ತಡ್ಕ ಶ್ರೀ ಗುರುಕೃಪಾ ವೈದಿಕ ಶಿಕ್ಷಣ ಸಮಿತಿಯ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು. 
ಈ ವೇಳೆ ಮಾತೆಯರು, ಮಕ್ಕಳು ಸೇರಿದಂತೆ ಭಕ್ತಾದಿಗಳು ಕ್ಷೇತ್ರ ವಠಾರದಲ್ಲಿ ಸಹಸ್ರಾರು ದೀಪಗಳನ್ನು ಬೆಳಗುವುದರೊಂದಿಗೆ ವಿಶೇಷ ದೀಪೋತ್ಸವ ನಡೆದು ದೇವರಿಗೆ ಧನುರ್ಮಾಸದ ಮಹಾಮಂಗಳಾರತಿ ನೆರವೇರಿತು. 
ತಾಯಿಯ ವಿಶೇಷ ಅಲಂಕಾರದಲ್ಲಿ ಸಹಸ್ರಾರು ದೀಪಗಳ ಬೆಳಕಿನಲ್ಲಿ ಪೂಜೆಯನ್ನು ಕಂಡು ಭಕ್ತರು ಕಣ್ತುಂಬಿಕೊಂಡು ಧನ್ಯರಾದರು. ಬಳಿಕ ಪ್ರಸಾದ ವಿತರಣೆ, ಉಪಹಾರ ವಿತರಣೆ ನಡೆಯಿತು. ಕ್ಷೇತ್ರದ ತಂತ್ರಿವರ್ಯರು, ಅರ್ಚಕ ವೃಂದ, ಆಡಳಿತ ಸಮಿತಿ, ಓಜ ಸಾಹಿತ್ಯ ಕೂಟ, ಮಹಿಳಾ ಸಂಘ, ಗುರು ಸೇವಾ ಪರಿಷತ್ ನ ಪದಾಧಿಕಾರಿಗಳು ಹಾಗೂ ಸದಸ್ಯರು, ಭಗವಧ್ಭಕ್ತರು ಉಪಸ್ಥಿತರಿದ್ದರು. 

ಚಿತ್ರಗಳು: ಪವನ್ ಆಚಾರ್ಯ ಮೋರ್ಕಳ.

Post a Comment

0 Comments