Ticker

6/recent/ticker-posts

Ad Code

ಚಿಪ್ಪಾರು ಅಮ್ಮೇರಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜಾತ್ರಾ ಮಹೋತ್ಸವದ ಗೊನೆ ಮುಹೂರ್ತ

 

ಚಿಪ್ಪಾರು : ಅಮ್ಮೇರಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ–2026ರ ಪೂರ್ವಭಾವಿಯಾಗಿ  ಗೊನೆ ಮುಹೂರ್ತ  ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ಜರಗಿತು. ಈ ಸಂದರ್ಭದಲ್ಲಿ ವಿಶೇಷ ಪೂಜೆ, ಹೋಮ–ಹವನಾದಿಗಳು ಜರುಗಿತು. ಬಳಿಕ ದೇವರ ಅನುಗ್ರಹದಿಂದ ಗೊನೆ ಮುಹೂರ್ತ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು ವೆಂಕಪ್ಪ ಪೂಜಾರಿ ಅಮ್ಮೇರಿ, ರವೀಂದ್ರ ಪೂಜಾರಿ ಅಮ್ಮೇರಿ, ಅಶೋಕ ಎಂ.ಸಿ. ಲಾಲ್‌ಬಾಗ್, ಅಧ್ಯಕ್ಷ ಸುದಾನಂದ ಎ. ಬಾಯಾರು ಪ್ರಧಾನ ಕಾರ್ಯದರ್ಶಿ ಅಜಿತ್ ಎಂ.ಸಿ. ಲಾಲ್ ಬಾಗ್,  ಕಿಶೋರ್ ಅಮ್ಮೇರಿ, ಸುರೇಶ್ ಅಮ್ಮೇರಿ  ಹಾಗೂ ಸುರೇಂದ್ರ ಎ.,ಸುರೇಶ ಅಮ್ಮೇರಿ ಉಪಸ್ಥಿತರಿದ್ದರು. ಜನವರಿ 31ರಂದು ಜರಗಲಿರುವ ಜಾತ್ರಾ ಮಹೋತ್ಸವವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಹುವಿಜೃಂಭಣೆಯಿಂದ ನಡೆಯಲಿದ್ದು, ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳು ಜರಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Post a Comment

0 Comments