Ticker

6/recent/ticker-posts

Ad Code

ಮುಂಡಿತ್ತಡ್ಕ ಸಮೀಪದ ಮುಗು ನಿವಾಸಿಗೆ ಉದ್ಯೋಗ ಭರವಸೆ ನೀಡಿ 3.5 ಲಕ್ಷ ರೂಪಾಯಿ ವಂಚನೆ

 

ಬದಿಯಡ್ಕ : ಉದ್ಯೋಗ ಕೊಡಿಸುವುದಾಗಿ ಹೇಳಿ ಮುಗು ನಿವಾಸಿಯೋರ್ವರಿಂದ 3.5 ಲಕ್ಷ ರೂಪಾಯಿ ಹಣ ಕರ್ನಾಟಕ ಹಾಗೂ ದೆಹಲಿ ಮೂಲದ ವ್ಯಕ್ತಿಗಳು ವಶಪಡಿಸಿ ವಂಚಿಸಿದ್ದಾರೆ ಎಂಬ ದೂರು ಬದಿಯಡ್ಕ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ. ಮುಂಡಿತ್ತಡ್ಕ ಸಮೀಪದ ಮುಗು ಪಳ್ಳಂ ಹೌಸ್‌ನ ಜೋಯಲ್ ಡಿಸೋಜಾ (21) ಎಂಬವರ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ದಕ್ಷಿಣ ಕನ್ನಡದ ಬೆಳ್ತಂಗಡಿಯ  ಸೋಹನ್ ಮತ್ತು ಪೂರ್ವ ದೆಹಲಿಯ ಓಂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆಯಲಾಗಿತ್ತು. ಒಪ್ಪಂದದ ಪ್ರಕಾರ, ಜೋಯಲ್ ಡಿಸೋಜಾ ಬ್ಯಾಂಕ್ ಖಾತೆಗಳ ಮೂಲಕ ಮತ್ತು ನೇರವಾಗಿ ಸೆಪ್ಟೆಂಬರ್ 28, ಅಕ್ಟೋಬರ್ 1, ನವೆಂಬರ್ 23, 2024, ಏಪ್ರಿಲ್ 26 ಮತ್ತು ಏಪ್ರಿಲ್ 29, 2025 ರಂದು ಹಣವನ್ನು ಪಾವತಿಸಿದ್ದರು. ಆದರೆ ಅವರು ಕೆಲಸ ಕೊಡಲಿಲ್ಲ ಅಥವಾ ಹಣವನ್ನು ಹಿಂದಿರುಗಿಸಲಿಲ್ಲ. ಇದರ ನಂತರ, ಜೋಯಲ್ ಡಿಸೋಜಾ ಪೊಲೀಸರಿಗೆ ದೂರು ನೀಡಿದ್ದಾರೆ.

Post a Comment

0 Comments