ಪೆರ್ಲ : ಶ್ರೀ ಸತ್ಯನಾರಾಯಣ ವಿದ್ಯಾ ಸಂಸ್ಥೆಗಳ ವತಿಯಿಂದ ನಡೆದ ವಾರ್ಷಿಕೋತ್ಸವ ಅಭೂತಪೂರ್ವ ದಾಖಲೆಯನ್ನೆ ನಿರ್ಮಿಸಿದೆ. ಬೆಳಗ್ಗೆ 9 ಗಂಟೆಗೆ ಆರಂಭವಾದ ಕಾರ್ಯಕ್ರಮಗಳು ರಾತ್ರಿ 12 ಗಂಟೆಗೆ ಸಮಾಪ್ತಿಗೊಂಡಿತ್ತು. ಸತತ 15 ಗಂಟೆಗಳ ಕಾರ್ಯಕ್ರಮ ವೈವಿಧ್ಯ ಇದೇ ಮೊಟ್ಟ ಮೊದಲ ಬಾರಿಗೆ ಸಂಘಟಿಸಲ್ಪಟ್ಟಿತ್ತು.
ಬೆಳಗ್ಗೆ ಧ್ವಜಾರೋಹಣದ ಬಳಿಕ ಅಂಗನವಾಡಿ, ಅಂಗ್ಲಭಾಷಾ ಮಾಧ್ಯಮ ಹಾಗೂ ಕಿರಿಯ,ಹಿರಿಯ, ಪ್ರೌಢ ಶಾಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಕುಸುಮಾವತಿ ಬಿ.ಉದ್ಘಾಟಿಸಿದರು.ಎಣ್ಮಕಜೆ ಪಂ.ಸದಸ್ಯೆ ಆಯಿಷಾ ಎ.ಎ, ಡಾ.ಪಳ್ಳತ್ತಡ್ಕ ಶಂಕರನಾರಾಯಣ ಭಟ್,ಸಹಾಯಕ ನಿರ್ದೇಶಕಿ ಉದಯಕುಮಾರಿ ಇ.ಆರ್.ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು, ಮಂಜೇಶ್ವರದ ಪ್ರಾಂಶುಪಾಲ ಮೊಹಮ್ಮದ್ ಅಲಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಯಂ, ಸತ್ಯನಾರಾಯಣ ವಿದ್ಯಾಸಂಸ್ಥೆಯ ಸಂಚಾಲಕ ಪಿ.ಯಸ್. ವಿಶ್ವಾಮಿತ್ರ,ಸದಾಶಿವ ಭಟ್ ಹರಿನಿಲಯ, ಶಾಲೆಗಳ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕ ರಕ್ಷಕ ಸಂಘದ, ಮಾತೃ ಸಂಘದ ಅಧ್ಯಕ್ಷರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ನಿವೃತ್ತರಾಗಲಿರುವ ಅಧ್ಯಾಪಕರಿಗೆ ಗೌರವಾರ್ಪಣೆ ನಡೆಯಿತು.





0 Comments