Ticker

6/recent/ticker-posts

Ad Code

ಎಣ್ಮಕಜೆ ಗ್ರಾ.ಪಂ.ಆಡಳಿತದ ಪ್ರಥಮ ವರ್ಕಿಂಗ್ ಗ್ರೂಫ್ ಸಭೆ

ಪೆರ್ಲ : ಎಣ್ಮಕಜೆ ಗ್ರಾ.ಪಂ. ಆಡಳಿತದ ಪ್ರಥಮ ವರ್ಕಿಂಗ್ ಗ್ರೂಫ್ ಸಭೆ ಎಣ್ಮಕಜೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಎಣ್ಮಕಜೆ ಪಂ.ಅಧ್ಯಕ್ಷೆ ಕುಸುಮಾವತಿ ಟೀಚರ್ ಉದ್ಘಾಟಿಸಿದರು. ಪಂ. ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್ ಅಧ್ಯಕ್ಷತೆವಹಿಸಿದ್ದರು. ಪಂ‌. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಧಾಕೃಷ್ಣ ನಾಯಕ್ ಜೆ.ಎಸ್.ಶೇಣಿ, ರಮ್ಲ, ವಿಜಯ ಕಜಂಪಾಡಿ, ಪಂ.ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್. ಗಾಂಭೀರ್,  ಹಾಗೂ ಪಂ.ಸದಸ್ಯರು, ಪಂ.ಕಾರ್ಯದರ್ಶಿ ಶಾನವಾಸ್, ಅಸಿಸ್ಟೆಂಟ್ ಕಾರ್ಯದರ್ಶಿ ಗಿರೀಶ್, ಪಂ. ಶೈಕ್ಷಣಿಕ ಕೋರ್ಡಿನೇಟರ್ ರಾಜೇಶ್ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು. ಎಲ್ಲಾ ವಾರ್ಡಿನ ವರ್ಕಿಂಗ್ ಗ್ರೂಫ್ ಸದಸ್ಯರು ಭಾಗವಹಿಸಿದ್ದರು.‌ ಮುಂದಿನ ಯೋಜನೆಗಳಿಗೆ ಚರ್ಚಿಸಿ ರೂಪುರೇಷೆ ನೀಡಲಾಯಿತು.
 

Post a Comment

0 Comments