ಉಪ್ಪಳ : ಬಾಯಾರು ಸಮೀಪದ ಬೆರಿಪದವು ಶ್ರೀ ಮೂಕಾಂಬಿಕಾ ಭಜನಾ ಮಂದಿರದ 19ನೇ ವರ್ಷದ ಕಾರ್ಯಕ್ರಮಗಳ ಅಂಗವಾಗಿ ಆಯೋಜಿಸಿದ ಬೃಹತ್ ಭಜನಾ ಸಂಗಮ ಕಾರ್ಯಕ್ರಮವು ಕುಣಿತ ಭಜನೆ ಹಾಗೂ ಭಜನಾ ಸಂಕೀರ್ತನೆಗೊಂದು ಆಧ್ಯಾತ್ಮಿಕ ವೇದಿಕೆಯೊದಗಿಸಿತು. ಅಂತರ್ ಜಿಲ್ಲೆಯ ಸುಮಾರು 30ಕ್ಕೂ ಮಿಕ್ಕಿದ ಭಜನಾ ತಂಡಗಳು ಶಿಸ್ತು ಬದ್ಧವಾಗಿ ಪಾಲ್ಗೊಂಡು ಅವಿಸ್ಮರಣೀಯ ವಾತಾವರಣ ಸೃಷ್ಠಿಸಿತು.
ಒಂದೊಂದು ಭಜನಾ ತಂಡಕ್ಕೂ ನಿಗದಿತ ಸಮಯ ಪರೀಧಿಯೊಳಗೆ ತಮ್ಮ ವಿಶೇಷತೆಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿತ್ತು. ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ಮಂಗಲೊತ್ಸವ ಹಾಡಿ ಸಂಪನ್ನಗೊಳಿಸಿದರು.

.jpeg)
0 Comments