Ticker

6/recent/ticker-posts

Ad Code

ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 75 ನೇ ವಾರ್ಷಿಕೋತ್ಸವ : ಲೋಗೋ ಆಮಂತ್ರಣ

 

ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 75 ನೇ ವಾರ್ಷಿಕೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ  ಒಂದು ವರ್ಷಗಳ ಪರ್ಯಂತ  ನಡೆಸಲಾಗುವುದು. 2026 ಮಾರ್ಚ್ 31 ರಂದು 74ನೇ ಶಾಲಾ ವಾರ್ಷಿಕೋತ್ಸವ ಮತ್ತು 75 ನೇ ವರ್ಷದ ವಾರ್ಷಿಕೋತ್ಸವದ ಉದ್ಘಾಟನೆಯನ್ನು ನಡೆಸಲಾಗುವುದು.

ಹಿನ್ನೆಲೆಯಲ್ಲಿ  ಬಂದಡ್ಕದ ಚರಿತ್ರೆಯನ್ನು ಒತ್ತಿ ಹೇಳುವ, ಕಲೆ, ಸಂಸ್ಕೃತಿಯನ್ನು ಪರಿಗಣಿಸಿಕೊಂಡು ಶಾಲೆಯ ಹಿರಿಮೆಯನ್ನು ಎತ್ತಿ ತೋರಿಸುವಂತಹ ಆಶಯಗಳನ್ನೊಳಗೊಂಡ "ಲೋಗೋ"  ಆಮಂತ್ರಿಸಲಾಗಿದೆ. ಆಯ್ಕೆಯಾದ "ಲೋಗೋ" ಗೆ ಬಹುಮಾನ ನೀಡಲಾಗುವುದು. ಲೋಗೋ 15x15   ಸೆಂ.ಮೀ  ಅಳತೆಗಿಂತ ಕಡಿಮೆಯಾಗಬಾರದು. "ಲೋಗೋ" ಕಳುಹಿಸುವವರು ತಮ್ಮ ಹೆಸರು, ಮೊಬೈಲ್ ನಂಬ್ರ, ಇಮೇಲ್ ಐಡಿ ಕಳುಹಿಸಬೇಕು. ಲೋಗೋ ತಯಾರಿಸಿ 2026 ಮಾರ್ಚ್ 24ರ ಒಳಗಾಗಿ  ಕಳುಹಿಸಿಕೊಡಬೇಕು. ನಂತರ ಬರುವ "ಲೋಗೋ" ಗಳನ್ನು ಸ್ವೀಕರಿಸಲಾಗುವುದಿಲ್ಲ  ಎಂದು ಶಾಲಾ ಅಧಿಕೃತರು ತಿಳಿಸಿದ್ದಾರೆ.

   "ಲೋಗೋ" ವನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. Email:ghssbandadka75@gmail.com

ಸಂಪರ್ಕಿಸಬೇಕಾದ ವಾಟ್ಸಾಪ್ ಸಂಖ್ಯೆಗಳು 8606159636, 8547334400, 9447735401

Post a Comment

0 Comments