Ticker

6/recent/ticker-posts

Ad Code

ಕರ್ನಾಟಕದ ಪ್ರತಿಷ್ಠಿತ 'ಹೊಯ್ಸಳ' ಪ್ರಶಸ್ತಿಗೆ ಕಾಸರಗೋಡು ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿ ಡಾ. ವಾಮನ್ ರಾವ್ ಬೇಕಲ್ ಆಯ್ಕೆ

ಕಾಸರಗೋಡು : ಗಡಿನಾಡಿನ ಕನ್ನಡ ಸೇವೆಯನ್ನು ಪರಿಗಣಿಸಿ, ಡಾ. ವಾಮನ್ ರಾವ್ ಬೇಕಲ್ ಇವರನ್ನು ಮೈಸೂರು ನಗರದ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಕೊಡಮಾಡುವ 2025 ನೇ ಸಾಲಿನ ರಾಜ್ಯ ಮಟ್ಟದ "ಹೊಯ್ಸಳ ಪ್ರಶಸ್ತಿ"ಗೆ ಆರಿಸಲಾಗಿದೆ ಎಂದು ಹೊಯ್ಸಳ ಕನ್ನಡ ಸಂಘ ಅಧ್ಯಕ್ಷರಾದ ಪತ್ರಕರ್ತ, ಸಾಹಿತಿ, ಸಂಘಟಕರಾದ ರಂಗನಾಥ್ ಮೈಸೂರು ತಿಳಿಸಿದ್ದಾರೆ.

ಇದೇ ಬರುವ ಏಪ್ರಿಲ್ 5 ರಂದು ಮೈಸೂರಿನ 'ನಾದಬ್ರಹ್ಮ' ಸಭಾಂಗಣದಲ್ಲಿ 'ಸವಿಗನ್ನಡ' ಪತ್ರಿಕೆಯ 26ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಗೌರವ ಸಂಚಾಲಕ ಡಾ. ರಘುರಾಮ್ ವಾಜಪೇಯಿ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಭವನ ಮೈಸೂರು ಘಟಕದ ಹಾಗೂ ಎಲ್ಲ ಕನ್ನಡ ಬಂದುಗಳನ್ನು ಭಾಗವಹಿಸುವಂತೆ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ವಿನಂತಿಸಿದ್ದಾರೆ.

 

Post a Comment

0 Comments