Ticker

6/recent/ticker-posts

Ad Code

ಪೆರ್ಲ ಕೆ.ಕೆ. ರಸ್ತೆಯಲ್ಲಿ ಮಿನಿ ಮಾಸ್ಟ್ ದೀಪ ಲೋಕಾರ್ಪಣೆ

 

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್‌ನ ಆರನೇ ವಾರ್ಡ್ ವ್ಯಾಪ್ತಿಯ ಪೆರ್ಲ ಪೇಟೆಯ ಕೆ.ಕೆ. ರಸ್ತೆಯಲ್ಲಿ ನೂತನವಾಗಿ ಅಳವಡಿಸಲಾದ ಮಿನಿ ಮಾಸ್ಟ್ ದೀಪವನ್ನು ಉದ್ಘಾಟಿಸಲಾಯಿತು.  ಪಂಚಾಯತ್ ನಿಧಿಯನ್ನು ವಿನಿಯೋಗಿಸಿ ಅನುಷ್ಠಾನಗೊಳಿಸಲಾದ ಈ ಯೋಜನೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ. ಕುಸುಮಾವತಿ ಅವರು ಸ್ವಿಚ್ ಒತ್ತುವ ಮೂಲಕ ನೆರವೇರಿಸಿದರು. ಪೆರ್ಲ ಪೇಟೆಯ ಪ್ರಮುಖ ಸಂಪರ್ಕ ರಸ್ತೆಯಾದ ಕೆ.ಕೆ. ರಸ್ತೆಯಲ್ಲಿ ರಾತ್ರಿ ವೇಳೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಪಾದಚಾರಿಗಳು, ವಾಹನ ಸವಾರರು ಹಾಗೂ ಸ್ಥಳೀಯ ವ್ಯಾಪಾರಿಗಳು ಅನುಭವಿಸುತ್ತಿದ್ದ ತೊಂದರೆಗೆ ಈ ಯೋಜನೆಯಿಂದ ಪರಿಹಾರ ಲಭಿಸಿದಂತಾಗಿದೆ. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಸಿದ್ಧೀಕ್ ವಳಮುಗೇರ್, ಸ್ಥಾಯಿ ಸಮಿತಿ ಅಧ್ಯಕ್ಷೆ ರಮ್ಲಾ ಇಬ್ರಾಹಿಂ, ಪಂಚಾಯತ್ ಸದಸ್ಯರಾದ ರಾಬಿಯಾ ಇರ್ಷಾದ್, ಆಯಿಷಾ ಪೆರ್ಲ, ಎ.ಕೆ. ಶರೀಫ್, ಅಬ್ದುಲ್ ಖಾದರ್, ಮುಹಮ್ಮದಲಿ, ಕೃಷ್ಣಪ್ಪ, ಅಬ್ದುಲ್ಲ ವಳಪ್ಪು, ಇಬ್ರಾಹಿಂ ಪೆರ್ಲ, ಇರ್ಷಾದ್ ಪೆರ್ಲ ಸೇರಿದಂತೆ ಹಲವರು  ಉಪಸ್ಥಿತರಿದ್ದರು.

Post a Comment

0 Comments