Ticker

6/recent/ticker-posts

Ad Code

ಅಮೈ ಶ್ರೀಕೃಷ್ಣ ಭಜನಾ ಮಂದಿರ ರಜತ ಮಹೋತ್ಸವಕ್ಕೆ ಧರ್ಮಸ್ಥಳ ಕ್ಷೇತ್ರದ ಅನುದಾನ ಹಸ್ತಾಂತರ

 

ಕಾಸರಗೋಡು : ಅಮೈ ಶ್ರೀಕೃಷ್ಣ ಭಜನಾ ಮಂದಿರ ರಜತ ಮಹೋತ್ಸವ ಸಮಿತಿಯ ಅಂಗವಾಗಿ ಭಜನಾ ಮಂದಿರದ ರಜತ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಪೂಜ್ಯ ಖಾವಂದರಿಗೆ ನೀಡಿದ್ದು ಈ ಪ್ರಕಾರ ಶ್ರೀ ಕ್ಷೇತ್ರದಿಂದ ಪ್ರಸಾದವಾಗಿ ಕೊಡಮಾಡಿದ ರೂ. 25,000/- ಮೊತ್ತವನ್ನು ಧರ್ಮಸ್ಥಳ ಬಿ ಸಿ ಟ್ರಸ್ಟ್ ಯೋಜನಾಧಿಕಾರಿ  ದಿನೇಶ್, ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷ ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಕಾಸರಗೋಡು ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ, ಸೇವಾ ಪ್ರತಿನಿಧಿ  ಶೋಭಾ, ಇವರು ಮಂದಿರಕ್ಕೆ ಭೇಟಿ ನೀಡಿ ರಜತ ಮಹೋತ್ಸವ ಅಧ್ಯಕ್ಷ ಕೆ. ಸದಾಶಿವ ಮಲ್ಯ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಜತ ಮಹೋತ್ಸವದ ಪ್ರದಾನ ಕಾರ್ಯದರ್ಶಿ ಗುಣಪಾಲ ಅಮೈ ನಗರಸಭಾ ಸದಸ್ಯರು ರಾಜೇಶ್ ಅಮೈ  ಮಂದಿರ ಉಪಾಧ್ಯಕ್ಷರು  ಪುಷ್ಪ ಕೋಶಾಧಿಕಾರಿ  ಮನೋಹರ ಸದಸ್ಯರಾದ ಪದ್ಮಾವತಿ, ಗಂಗಾವತಿ ಉಪಸ್ಥಿತರಿದ್ದರು.

Post a Comment

0 Comments