ಪೆರ್ಲ : ಶೇಣಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಮಾರ್ಚ್ 14 ಶನಿವಾರ (ನಾಳೆ) ನಡೆಯಲಿದೆ. ಇದರ ಅಂಗವಾಗಿ ಬೆಳಗ್ಗೆ ಗಂಟೆ 8.30ರಿಂದ ಗಣಪತಿ ಹವನ, 9ಗಂಟೆಗೆ ಸಾಮೂಹಿಕ ಸಂಕಲ್ಪ ಪ್ರಾರ್ಥನೆ, ಶ್ರೀ ಶನೈಶ್ಚರ ಪೂಜೆ ಪ್ರಾರಂಭ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 6 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಮಹಿಳಾ ಭಜನಾ ಮಂಡಳಿ ಶೇಣಿ, ಇವರಿಂದ ಭಜನೆ, ರಾತ್ರಿ 7 ಗಂಟೆಗೆ ಸಾಮೂಹಿಕ ಭಜನೆ, 8-30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಲಿದೆ.

0 Comments