ಕಾಸರಗೋಡು : ಜಿಲ್ಲೆಯ ಹೆಚ್ಚಿನೆಡೆಗಳಲ್ಲಿ ಸೋಮವಾರ ರಾತ್ರಿ ಸಾಧಾರಣ ಮಳೆಯಾಗಿದೆ. ನೆರೆಯ ಕರ್ನಾಟಕ ಗಡಿ ಭಾಗದ ಕೆಲವೆಡೆಗಳಲ್ಲೂ ಗುಡುಗು, ಸಿಡಿಲು ಸಹಿತ ಮಳೆಯಾಗಿರುವುದಾಗಿ ವರದಿಯಾಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಗಾಳಿ ಬೀಸಿ ಕ್ಷಣ ಕಾಲ ಮಳೆಯಾಗಿದ್ದು, ಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ತಂಪಿನ ಅನುಭವ ನೀಡಿದೆ.
ಮೈಸೂರು ಜಿಲ್ಲೆಯ ಬೆಟ್ಟದಪುರ ಹಾಗೂ ಮೈಸೂರು ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ದಾವಣಗೆರೆ, ಹರಿಹರ, ಹೊನ್ನಾಳಿ, ವಿಜಯನಗರ ಜಿಲ್ಲೆಯ ಕೊಟ್ಟೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೇಹೊನ್ನೂರು ಭಾಗಗಳಲ್ಲಿಯೂ ಉತ್ತಮ ಮಳೆಯಾದ ವರದಿಯಾಗಿದೆ. ದಕ್ಷಿಣ ಕೇರಳದಲ್ಲೂ ಮಳೆ ಸುರಿದಿರುವುದಾಗಿ ವರದಿಯಾಗಿದೆ.
ಮುಂದಿನ 2 ದಿನ ದ.ಕ.ಸಹಿತ ಕಾಸರಗೋಡಿನಲ್ಲೂ ಉತ್ತಮ ಮಳೆಯ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

0 Comments