Ticker

6/recent/ticker-posts

Ad Code

ಬೊಲ್ಕಿನಡ್ಕದಲ್ಲಿ ಹಟ್ಟಿಗೆ ಬೆಂಕಿ : ಸಕಾಲಿಕ ಕಾರ್ಯಚರಣೆಯಿಂದ ಅಪಾಯದಿಂದ ಪಾರು


ಪೆರ್ಲ :  ಪಜ್ಜಾನ ಸಮೀಪದ ಬೊಲ್ಕಿನಡ್ಕದಲ್ಲಿ ದನ ಸಾಕಾಣೆಯ ಹಟ್ಟಿಯೊಂದಕ್ಕೆ  ಬೆಂಕಿ ತಗುಲಿದ್ದು ಮನೆಯವರ ಮತ್ತು ಕಾಸರಗೋಡು ಅಗ್ನಿಶಾಮಕ ದಳದವರ ಸಕಾಲಿಕ ಕಾರ್ಯಚರಣೆಯಿಂದ ಅಪಾಯದಿಂದ ಪಾರಾಗಿದೆ. ಇಲ್ಲಿನ ಬೊಲ್ಕಿನಡ್ಕ ನಿವಾಸಿ ಜೆಮ್ಸ್ ಡಿಸೋಜರ ಮನೆ ಸಮೀಪ ಇರುವ ಹಟ್ಟಿಯ ಕೊಟ್ಟಿಗೆಗೆ ಮಧ್ಯರಾತ್ರಿ 3 ಗಂಟೆಗೆ ಬೆಂಕಿ ತಗುಲಿದ್ದು ದನ ಕರುಗಳ ಅರಾಚಾಟದಿಂದ ಮನೆಯವರ ಅರಿವಿಗೆ ಬಂದಿದ್ದು ತಕ್ಷಣ ಸಾಹಸಿಕ ರೀತಿಯಲ್ಲಿ ಜಾನುವಾರುಗಳನ್ನು ಹಟ್ಟಿಯೊಳಗಿನಿಂದ ತೆರವುಗೊಳಿಸಲಾಯಿತು.
ಹಟ್ಟಿಯ ಮಾಡಿನಲ್ಲಿ ಸಂಗ್ರಹಿಸಿಟ್ಟಿದ್ದ ಬೈ ಹುಲ್ಲಿಗೆ ಬೆಂಕಿ ತಗುಲಿದ್ದು ಶಾರ್ಟ್ ಸಕ್ಯೂಟಿನಿಂದ ದುರಂತ ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ.


ಕಾಸರಗೋಡಿನ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಸಹಕರಿಸಿತು.ಸುಮಾರು 3 ಲಕ್ಷ ರೂಗಳ ನಾಶ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ
.

Post a Comment

0 Comments