Ticker

6/recent/ticker-posts

Ad Code

ಮಂಗಳೂರಿನಲ್ಲಿ ಕುಕ್ಕರ್ ನಲ್ಲಿ ಬಾಂಬಿರಿಸಿ ಸಾಗಿಸಿದ ಉಗ್ರ ಶಾರೀಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ 94 ಸಾವಿರ ರೂಪಾಯಿ ದಂಡ


 ಮಂಗಳೂರುಮಂಗಳೂರಿನಲ್ಲಿ  ಕುಕ್ಕರ್ ನಲ್ಲಿ ಬಾಂಬು ಇರಿಸಿ ಬ್ಲಾಸ್ಟ್ ಗೈಯಲು ಪ್ರಯತ್ನಿಸಿದ  ಉಗ್ರ ಮೊಹಮ್ಮದ್ ಶಾರೀಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

ಮಂಗಳೂರಿನ ಕದ್ರಿಯಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಆರೋಪಿ ಮೊಹಮ್ಮದ್ ಶಾರೀಕ್‌ಗೆ ಈಗ ನ್ಯಾಯಾಲಯ ತಕ್ಕ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಎನ್‌ಐಎ  ವಿಶೇಷ ನ್ಯಾಯಾಲಯವು ಶಾರೀಕ್‌ನನ್ನು ದೋಷಿ ಎಂದು ಪರಿಗಣಿಸಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 94 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಐಸಿಸ್ ನೆಟ್‌ವರ್ಕ್ ಬೆಳೆಸಿ, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಈತನಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Post a Comment

0 Comments