ಉಡುಪಿ : ಹೆರ್ಗಾ ಗ್ರಾಮದ ಹೊಳೆಬಾಗಿಲು ನದಿಗೆ ಈಜಲು ಹೋದ ರಿಕ್ಷಾ ಚಾಲಕರೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಹೆರ್ಗಾ ಗ್ರಾಮದ ನಾರಾಯಣ ಪೂಜಾರಿ ಎಂಬವರ ಮಗ ಸುಜಿತ್ ಕುಮಾರ್(42) ಎಂದು ಗುರುತಿಸಲಾಗಿದೆ.
ರಿಕ್ಷಾ ಬಾಡಿಗೆ ಕೆಲಸ ಮಾಡಿಕೊಂಡಿದ್ದ ಇವರು, ಕೆಲಸಕ್ಕೆ ರಿಕ್ಷಾದಲ್ಲಿ ಮನೆಯಿಂದ ಹೋಗಿದ್ದರು. ಬಳಿಕ ಹೊಳೆಬಾಗಿಲು ನದಿಗೆ ಈಜಲು ಹೋಗಿದ್ದು, ಅಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಬೆಳಗ್ಗೆ 7ಗಂಟೆ ಸುಮಾರಿಗೆ ನದಿಯ ಕಿನಾರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments