Ticker

6/recent/ticker-posts

Ad Code

19.340 ಗ್ರಾಂ ಎಂಡಿಎಂಎ ಸಹಿತ ಓರ್ವನ ಸೆರೆ

 

ಕುಂಬಳೆ :  ಪೊಲೀಸರು ನಡೆಸಿದ ಪರಿಶೋಧನೆಯಲ್ಲಿ  ಮಾರಕ ಮಾದಕ ವಸ್ತು ಎಂಡಿಎಂಎ ಸಹಿತ ಯುವಕನೋರ್ವನನ್ನು ಬಂಧಿಸಲಾಗಿದೆ. ಮಂಗಳೂರಿನ ಪೆರ್ಮನ್ನೂರು ನಿವಾಸಿ ಸಯ್ಯದ್ ಅಫ್ರಿದಿ (28) ಬಂಧಿತ ವ್ಯಕ್ತಿ. ಶನಿವಾರ ಶಿರಿಯಾ ಮುಟ್ಟಂನಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕುಂಬಳೆ ಸಬ್-ಇನ್ಸ್‌ಪೆಕ್ಟರ್ ಸನೀತ್ ಸಿ ನೇತೃತ್ವದ ಪೊಲೀಸ್ ತಂಡವು ಬೇರೊಂದು  ಪ್ರಕರಣದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಮುಟ್ಟಂ ಸರ್ವಿಸ್ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸ್ಕೂಟರ್‌ನಲ್ಲಿ ಕುಳಿತಿದ್ದ ಅಫ್ರಿದಿ, ಪೊಲೀಸ್ ವಾಹನವನ್ನು ನೋಡಿ  ಓಡಲೆತ್ನಿಸಿದಾಗ  ಆತನನ್ನು ತಡೆದ ಪೊಲೀಸ್ ತಂಡ  ಆತನನ್ನು ಪರಿಶೋಧಿಸಿದ್ದು, ಪ್ಯಾಂಟ್ ಜೇಬಿನಲ್ಲಿ ಇರಿಸಲಾಗಿದ್ದ ಚರ್ಮದ ಚೀಲದೊಳಗೆ 19.340 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.

 ಆರೋಪಿಯು ಮಾದಕ ವಸ್ತುವನ್ನು ಮಾರಾಟಕ್ಕಾಗಿ  ತಂದಿರುವುದೆಂದು  ಒಪ್ಪಿಕೊಂಡಿದ್ದಾನೆ.  19.340 ಗ್ರಾಂ ಎಂಡಿಎಂಎ ಮತ್ತು ಅದನ್ನು ಸಾಗಿಸಲು ಬಳಸಿದ ಕೆಎ 19 ಎಚ್‌ಯು 7786 ಸಂಖ್ಯೆಯ ಸ್ಕೂಟಿಯನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಐಫೋನ್ ಮತ್ತು ರೆಡ್‌ಮಿ ಫೋನ್ ಸೇರಿದಂತೆ ಎರಡು ಮೊಬೈಲ್ ಫೋನ್‌ಗಳು ಮತ್ತು  400 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಕುಂಬಳೆ ಪೊಲೀಸ್ ಠಾಣೆಯ ಎ.ಎಸ್.ಐ. ಅತುಲ್ ರಾಮ್, ಸಿ.ಪಿ. ಒಮರಾಯ ಸಜೀಶ್ ಮತ್ತು ಮಹೇಶ್ ತಂಡದಲ್ಲಿದ್ದರು.

Post a Comment

0 Comments