ಕಣ್ಣೂರು : ಲೈಂಗಿಕ ದೌರ್ಜನ್ಯದ ದೂರಿನ ಮೇರೆಗೆ ಕೆಎಸ್‌ಯು ಕಣ್ಣೂರು ಜಿಲ್ಲಾಧ್ಯಕ್ಷ ಎಂ.ಸಿ. ಅತುಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲೈಂಗಿಕ ಉದ್ದೇಶದಿಂದ ತನ್ನನ್ನು ಮುಟ್ಟಲಾಗಿದೆ ಎಂದು ಯುವತಿಯೋರ್ವೆ ದೂರು ನೀಡಿದ್ದಾಳೆ. ಮದುವೆ ಭರವಸೆ ನೀಡಿ ಹಣ ಪಡೆದು ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅತುಲ್ ಪ್ರಸ್ತುತ ತಲೆ ಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಕೆಎಸ್‌ಯು ಕಾರ್ಯಕರ್ತೆಯಾಗಿರುವ ಯುವತಿ 2018 ರಿಂದ ಅತುಲ್ ಜೊತೆ ಸ್ನೇಹ ಬೆಳೆಸಿದ್ದಾಳೆ. ಆ ವರ್ಷದ ಪ್ರವಾಸದ ಸಮಯದಲ್ಲಿ ತನ್ನನ್ನು ಲೈಂಗಿಕ ಉದ್ದೇಶದಿಂದ ಮುಟ್ಟಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅತುಲ್ ವಿವಿಧ ಸಂದರ್ಭಗಳಲ್ಲಿ 1,60,000 ರೂ.ಗಳನ್ನು ಪಡೆದಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

0 Comments