Ticker

6/recent/ticker-posts

Ad Code

ಪದ್ಮಶ್ರೀ ಸತ್ಯನಾರಾಯಣ ಬೆಳೇರಿಯವರ ಭತ್ತದ ತಳಿಗಳ ಸಂರಕ್ಷಣೆ, ಸಂಶೋಧನಾ ಕೇಂದ್ರ ಸ್ಥಾಪನೆಗೆ 'ಅತಿಕಾರ' ಟ್ರಸ್ಟ್ ರಚನೆ

 

ಮುಳ್ಳೇರಿಯ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಸಂರಕ್ಷಿಸಿರುವ 650ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಜೋಪಾನವಾಗಿ ಶೇಖರಿಸಿಡಲು ಭತ್ತದ ತಳಿಗಳ ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ ಸ್ಥಾಪನೆಗೆ 'ಅತಿಕಾರ' ಟ್ರಸ್ಟ್ ರಚಿಸಲು ನಿರ್ಣಯಿಸಸಲಾಗಿದೆ. ವಿಷು ದಿನವಾದ ಬುಧವಾರ ಬೆಳೇರಿ ಅಭಿಮಾನಿ ಬಳಗ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸಿ ಸಭೆ ಆಯೋಜಿಸಲಾಗಿತ್ತು

ರಾಮಾಯಣ ಕಾಲದ ಭತ್ತದ ತಳಿಯಾದ 'ಅತಿಕಾರ' ಹೆಸರಿನಲ್ಲಿ ಟ್ರಸ್ಟ್ ರಚಿಸಿ, ತಳಿ ಅಧ್ಯಯನ ಮತ್ತು ಸಂರಕ್ಷಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಉದ್ಯಮಿ ಮಧುಸೂಧನ ಆಯರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸತ್ಯನಾರಾಯಣ ಬೆಳೇರಿ, ಕಲ್ಲಗ ಚಂದ್ರಶೇಖರ ರಾವ್, ಎಂ.ನಾ. ಚಂಬಲ್ತಿಮಾರ್, ಕುಂಞಿರಾಮ ಮಾಸ್ತರ್, ದಯಾನಂದ ರೈ ಕಳ್ವಾಜೆ ಭಾಗವಹಿಸಿದ್ದರು.

Post a Comment

0 Comments