ಪೆರ್ಲ: ಸ್ವರ್ಗ ಸಮೀಪದ ಪಡ್ರೆ ಸೂರಂಬೈಲುಕಟ್ಟೆ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೂತನ ನಾಗಶಿಲಾ ಪ್ರತಿಷ್ಠೆ ಏ.24ರಂದು ಬ್ರಹ್ಮಶ್ರೀ ವಿಶ್ವೇಶ್ವರ ಪುರೋಹಿತ ಆಚಾರ್ಯ ಬೆಳ್ಳಾರೆ ನೇತೃತ್ವದಲ್ಲಿ ಜರುಗಲಿದೆ. ಕಾರ್ಯಕ್ರಮ ಪ್ರಯುಕ್ತ 23ರಂದು ಸಂಜೆ 4ಕ್ಕೆ ಋತ್ವಿಜನರ ಆಗಮನ, ದೀಪ ಪ್ರಜ್ವಲನೆ, ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಅಧಿವಾಸಾದಿ ಕ್ರಿಯೆಗಳು ನಡೆಯಲಿವೆ.
24ರಂದು ಬೆಳಗ್ಗೆ 8.23ರಿಂದ 9.32ರ ವೃಷಭ ಲಗ್ನದಲ್ಲಿ ಶ್ರೀ ದೇವಿಯ ಬಿಂಬ ಪ್ರತಿಷ್ಠೆ ಮತ್ತು ಶ್ರೀ ನಾಗದೇವರ ಪ್ರತಿಷ್ಠೆ, ಆಶ್ಲೇಷ ಬಲಿ, ಪರಿವಾರ ಸಾನಿಧ್ಯಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ವಸಂತಪೂಜೆ, ಸೇವಾಲಂಕಾರ ಪೂಜೆ, 11ರಿಂದ ತ್ರಿವೇಣಿ ವಿಶ್ವೇಶ್ವರ ಪುರೋಹಿತ ಮತ್ತು ಗೀತಾಯಜ್ಞ ಬಳಗದವರಿಂದ ಶ್ರೀ ಲಲಿತಾ ಸಹಸ್ರನಾಮ ಪಠನೆ, ಶ್ರೀ ಭಗವದ್ಗೀತೆ ಪಾರಾಯಣ, ಮಧ್ಯಾಹ್ನ 12.30ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ, 2.00ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 6.30ರಿಂದ ಭಜನಾ ಸೇವೆ ನಡೆಯಲಿದೆ.

0 Comments