Ticker

6/recent/ticker-posts

Ad Code

ಏ 28 ರಿಂದ ಬೆಳಿಂಜ ಗುತ್ತು ಪುನರ್ ಪ್ರತಿಷ್ಠಾ ಮತ್ತು ನೂತನ ತರವಾಡು ಮನೆಯ ಗೃಹಪ್ರವೇಶ, ಬ್ರಹ್ಮಕಲಶ ಹಾಗೂ ಧರ್ಮನೇಮೋತ್ಸವ

 

ಬದಿಯಡ್ಕ, :  ಕುಂಬ್ಡಾಜೆ   ಗ್ರಾಮದ ಬೆಳಿಂಜಗುತ್ತಿನಲ್ಲಿ  ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಬೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನೂತನ ಗೃಹಪ್ರವೇಶ, ಶ್ರೀ ಧರ್ಮಧೈವ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಧರ್ಮನೇಮೋತ್ಸವವು  ಏ. 28ರ ಮಂಗಳವಾರದಿಂದ ಮೇ 01 ಶುಕ್ರವಾರದ ತನಕ ನಡೆಯಲಿದೆ. 

ಏ 28 ರಂದು ಸಂಜೆ ಗಂಟೆ 5.30ಕ್ಕೆ  ತಂತ್ರಿವರ್ಯರ ಆಗಮನ ಹಾಗೂ ಪೂರ್ಣ ಕುಂಭ ಸ್ವಾಗತ, ಸಂಜೆ ಗಂಟೆ 7.00 ಪುಣ್ಯಹವಾಚನ, ಸ್ಥಳಶುದ್ದಿ, ಪ್ರಾಸಾದ ಶುದ್ದಿ ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ. 

 ಏ 29 ಬುಧವಾರ ಪೂರ್ವಾಹ್ನ ಗಂಟೆ 7.00 ಕ್ಕೆ  ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ನೂತನ ಗೃಹ ಪ್ರವೇಶ ಗಂಟೆ 9.48  ಮಿಥುನಲಗ್ನ ಸುಮೂಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ವೆಂಕಟರಮಣ ದೇವರ ಹರಿಸೇವೆ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ. ಪೂರ್ವಾಹ್ನ ಗಂಟೆ 11.30ಕ್ಕೆ  ಮುಡಿಪು ಕಟ್ಟುವುದು,  ಮಧ್ಯಾಹ್ನ ಗಂಟೆ 1.00 ರಿಂದ ಅನ್ನಪ್ರಸಾದ, ಅಪರಾಹ್ನ ಗಂಟೆ 3.00ಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಗಮನ ಹಾಗೂ ಪೂರ್ಣಕುಂಭ ಸ್ವಾಗತ ಸಾಯಂ ಗಂಟೆ 3.30 ರಿಂದ ಸಭಾ ಕಾರ್ಯಕ್ರಮ ನಡೆಯಲಿರುವುದು. 

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಆರಂಬೂರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು,  ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನ, ಒಡಿಯೂರು ಆಶೀರ್ವಚನ ನೀಡುವರು.   ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ ಧಾರ್ಮಿಕ ಭಾಷಣ ಮಾಡಲಿದ್ದು, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ, ಶಿಲ್ಪಿ ಶ್ರೀ ರಮೇಶ ಕಾರಂತ ಬೆದ್ರಡ್ಕ ಇವರಿಗೆ ಗೌರವಾರ್ಪಣೆ ನಡೆಯಲಿರುವುದು.   ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ ಮುಖ್ಯ ಅತಿಥಿಗಳಾಗಿರುವರು.   ಸಂಜೀವ ಶೆಟ್ಟಿ ಮೊಟ್ಟೆಕುಂಜ ಧಾರ್ಮಿಕ ಮುಂದಾಳು, ನ್ಯಾ. ಸುಬ್ಬಯ್ಯ ರೈ ಅಧ್ಯಕ್ಷರು ಬಂಟರ ಸಂಘ ಕಾಸರಗೋಡು ಜಿಲ್ಲೆ,  ರವೀಂದ್ರ ರೈ ಗೋಸಾಡ ಉಪಾಧ್ಯಕ್ಷರು ಕುಂಬ್ಡಾಜೆ ಗ್ರಾಮ ಪಂಚಾಯತು,  ರಾಮಣ್ಣ ಶೆಟ್ಟಿ ಇಂಚರ ಅಧ್ಯಕ್ಷರು ಬ್ರಹ್ಮ ಕಲಶ ಸಮಿತಿ, ಹರಿಪ್ರಸಾದ್ ರೈ ಪುತ್ರಕಳ, ಉದ್ಯಮಿ ಸ್ಕಂದ ಬದಿಯಡ್ಕ  ಉಪಸ್ಥಿತರಾಗಿರುವರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಸಸಿಹಿತ್ಲು ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ  ದಯಾನಂದ ರೈ ಕಳುವಾಜೆ  ವಂದಿಸುವರು. ಪ್ರಿಯಾಂಕ ಎಸ್ ರೈ ಕರ್ನೂರು ಪತ್ತಾಯ ಪ್ರಾರ್ಥನೆ ಹಾಡುವರು.

ಸಂಜೆ 7.00 ಗಂಟೆಗೆ ತೊಡಙಲ್ ರಾತ್ರಿ ಗಂಟೆ 9.00ರಿಂದ   ಅನ್ನಪ್ರಸಾದ, ರಾತ್ರಿ ಗಂಟೆ 10.00 ಕ್ಕೆ  ಕುಪ್ಪೆ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ಕೋಲ ನಡೆಯಲಿರುವುದು.  ಏ. 30 ಗುರುವಾರದಂದು ಪ್ರಾತಃಕಾಲ 4.00 ಕ್ಕೆ ಕೊರತ್ತಿ ದೈವದ ಕೋಲ. ಪೂರ್ವಾಹ್ನ ಗಂಟೆ 10.00ಕ್ಕೆ  ಪಟ್ಟದ ದೈವ ಬೀರ್ನಾಳ ದೈವದ ನೇಮ, ಪ್ರಸಾದ ಸ್ವೀಕಾರ ಮಧ್ಯಾಹ್ನ ಗಂಟೆ 1.00 ರಿಂದ ಅನ್ನಪ್ರಸಾದ, ಅಪರಾಹ್ನ ಗಂಟೆ 2.00ರಿಂದ ರಕ್ತೇಶ್ವರಿ ದೈವದ ನೇಮ 7.30ರಿಂದ ಖ್ಯಾತ ಸಂಕೀರ್ತನಕಾರರಾದ   ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು  ಶ್ರೀ ಮಧ್ವಾಧೀಶ ವಿಠಲ ದಾಸ  ಇವರಿಂದ ಭಜನಾ ಸಂಕೀರ್ತನೆ ನಡೆಯಲಿರುವುದು. ರಾತ್ರಿ ಗಂಟೆ 9.00 ರಿಂದ ಅನ್ನಪ್ರಸಾದ  ರಾತ್ರಿ ಗಂಟೆ 12.00 ಕ್ಕೆ  ಪೊಟ್ಟನ್  ದೈವದ ನೇಮ ಹಾಗೂ ಕೆಂಡ ಸೇವೆ ಜರಗಲಿದೆ.  

 ಮೇ 01 ಶುಕ್ರವಾರದಂದು  ಪೂರ್ವಾಹ್ನ  10.00 ಗಂಟೆಗೆ  ಶ್ರೀ ಧರ್ಮದೈವ ಧೂಮಾವತಿ ದೈವದ ನೇಮ, ಪ್ರಸಾದ ಸ್ವೀಕಾರ ಮಧ್ಯಾಹ್ನ 1.00ರಿಂದ  ಅನ್ನ ಪ್ರಸಾದ ಅಪರಾಹ್ನ 2.00ಗಂಟೆಗೆ   ಶ್ರೀ ಗುಳಿಗ ದೈವದ ಕೋಲ ನಡೆಯಲಿದೆ.  ಮೇ 02 ಶನಿವಾರ ಬೆಳಗ್ಗೆ 9.00ರಿಂದ ದಿ. ಸಂಕಮ್ಮ ಮತ್ತು ಮಕ್ಕಳು ಅಮೈ ಕಾಸರಗೋಡು ಇವರಿಂದ ಕೊರತಿ ದೈವದ ಹರಕೆ ಕೋಲ ನಡೆಯಲಿದೆ.

Post a Comment

0 Comments