Ticker

6/recent/ticker-posts

Ad Code

ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಎರಡನೇ ಹಂತದ ಕಾಮಗಾರಿಗೆ ಚಾಲನೆ

 

ಮಂಗಲ್ಪಾಡಿ : ಮಠ - ಮಂದಿರಗಳ ಉನ್ನತಿಯೇ ಜನಾಂಗದ ಏಳಿಗೆಯ ಮುನ್ನುಡಿ ಎಂದು ಡಾ|| ಶ್ರೀಧರ ಭಟ್ ಅಭಿಪ್ರಾಯ ಪಟ್ಟರು.ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಅವರು ಭವ್ಯ ಇತಿಹಾಸ ಹೊಂದಿರುವ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಎರಡನೇ ಹಂತದ ಕಾಮಗಾರಿಯ ಬಗ್ಗೆ ಚಾಲನೆ ನೀಡಿದರು.

ಈ ಮಂದಿರ  ಪರಿಪೂರ್ಣವಾಗುವಲ್ಲಿ  ಹಣದ ಅವಶ್ಯಕತೆ ಎಷ್ಟು ಮುಖ್ಯವೋ , ಜನರ ಒಗ್ಗಟ್ಟಿನ ಮನೋಭಾವನೆಯೂ ಅಷ್ಟೇ ಮುಖ್ಯ ಎಂದು ಮಂದಿರದ ಭಕ್ತಾಭಿಮಾನಿಗಳನ್ನು ಪ್ರೋತ್ಸಾಹಿಸಿದರು. ಈ ಯೋಜನೆಗೆ ಅಂದಾಜು ವೆಚ್ಚ ಸುಮಾರು 85 ಲಕ್ಷದಷ್ಟಾಗಬಹುದು ಇದಕ್ಕೆ ಎಲ್ಲರ ಸಹಕಾರ ಬಯಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಕಾರ್ಯವಾಹ  ಲೋಕೇಶ್ ಜೋಡುಕಲ್ಲು ಮಾರ್ಗದರ್ಶನ ನೀಡಿದರು. ಮಾಜಿ ವಿಧಾನ ಪರಿಸದ್ ಸದಸ್ಯರಾದ  ಮೋನಪ್ಪ ಭಂಡಾರಿ ಸದಾಶಯದ ನುಡಿಗಳನ್ನಾಡಿದರು. ಶ್ರೀಧರ್ ಶೆಟ್ಟಿ ಪರಂಕಿಲ ಸ್ವಾಗತಿಸಿ, ಸುರೇಶ್ ಶೆಟ್ಟಿ ಪರಂಕಿಲ ಧನ್ಯವಾದವಿತ್ತರು. ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀಕೃಷ್ಣ. ಪಿ. ಬಂದ್ಯೋಡು, ಲಿಂಗಪ್ಪ ಶೆಟ್ಟಿಗಾರ್, ಪ್ರಭಾಕರ ಶೆಣೈ, ಶ್ರೀಧರ ಶೆಟ್ಟಿ,  ಬಾಲಕೃಷ್ಣ ಅಂಬಾರ್   ಇವರ ನೇತೃತ್ವದಲ್ಲಿ 2ನೇ ಹಂತದ ಕಾಮಗಾರಿಗೆ ನೂತನ ಸಮಿತಿಯನ್ನು ಘೋಷಿಸಲಾಯಿತು.

ನೂತನ ಸಮಿತಿ ಗೌರವ ಮಾರ್ಗದರ್ಶಕರಾಗಿ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ನಿತ್ಯಾನಂದ ಆಶ್ರಮ ಕೊಂಡೆವೂರು ಮಠ, ಸಲಹೆಗಾರರಾಗಿ  ಮೋನಪ್ಪ ಭಂಡಾರಿ,  ವೀರಪ್ಪ ಅಂಬಾರ್ , ಸುರೇಶ್ ಶೆಟ್ಟಿ ಪರಂಕಿಲ,  ಸುಬ್ರಯಾ ಹೇರಳ,  ಪ್ರೇಮ್ ಕುಮಾರ್ ಐಲ, ಮೋಹನ್ ದಾಸ್ ಐಲ, ಶಂಕರ್ ಶೇರಿಗಾರ್ ಪರಂಕಿಲ,  ಹರೀನಾಥ ಭಂಡಾರಿ ಮುಳಿಂಜ, ಗೌರವಾಧ್ಯಕ್ಷರಾಗಿ  ಸಂಜೀವ ಶೆಟ್ಟಿ ತಿಂಬರ, ಅಧ್ಯಕ್ಷರಾಗಿ ವಿಜಯಕುಮಾರ್ ರೈ ಪರಂಕಿಲ, ಉಪಾಧ್ಯಕ್ಷರಾಗಿ  ರಾಘವ ಕೊಪ್ಪಳ,  ಜಯಲಕ್ಷ್ಮಿ ಕಾರಂತ್, ವಸಂತಕುಮಾರ್ ಮಯ್ಯ, ಸುರೇಶ್ ಶೆಟ್ಟಿ ಕುಂಡಲ , ಚಂದ್ರಶೇಖರ (ಚರಣ್ )ಬಂದ್ಯೋಡು. ಜಯಂತಿ ಟಿ ಶೆಟ್ಟಿ ಬಂದ್ಯೋಡು, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ತುಂಗ, ಕಾರ್ಯದರ್ಶಿಗಳಾಗಿ   ರಾಕೇಶ್ ಪರಂಕಿಲ,  ಅಮಿತ್ ಪರಂಕಿಲ,  ಪವನ್ ಮುಟ್ಟ, ರಾಮಚಂದ್ರ ಬಲ್ಲಾಳ್, ಸಾಕ್ಷಿ ಪಂಜ, ರಕ್ಷಿತ್ ರೈ ಪರಂಕಿಲ, ಚಂದ್ರಹಾಸ ಶೆಟ್ಟಿ ಪರಂಕಿಲ, ಲಕ್ಷ್ಮೀಶ ಶೆಟ್ಟಿಗಾರ್ ಪೋರಿಕೋಡು, ಖಜಾಂಜಿ ರಮೇಶ್ ಹೊಳ್ಳ ಪರಂಕಿಲ, ಲೆಕ್ಕ ಪರಿಶೋಧಕರು ಅಭಿಜಿತ್ ಪರ೦ಕಿಲ, ಶಾರದಾ ಮಹಿಳಾ ಸಂಘ ಪರಂಕಿಲ ಇವನ್ನು ಆಯ್ಕೆ ಮಾಡಲಾಯಿತು

Post a Comment

0 Comments