Ticker

6/recent/ticker-posts

Ad Code

ಕಾಳ್ಯಂಗಾಡು ಬ್ರಹ್ಮಕಲಶೋತ್ಸವಕ್ಕೆ ಬೃಹತ್ ಹೊರೆಕಾಣಿಕೆ ಮೆರವಣಿಗೆ ಸಮರ್ಪಣೆ

 

ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಮೆರವಣಿಗೆಯು ಕಾಸರಗೋಡು ಮಲ್ಲಿಕಾರ್ಜುನ ಕ್ಷೇತ್ರದಿಂದ ಹೊರಟು‌ ಕರಂದಕ್ಕಾಡು, ಕೂಡ್ಲು ಮೀಪುಗುರಿ ಮೂಲಕ ಕಾಳ್ಯಂಗಾಡು ಕ್ಷೇತ್ರಕ್ಕೆ ಸಾಗಿ ಬಂತು. ಸಮಿತಿ ಅಧ್ಯಕ್ಷ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ  ಕ್ಷೇತ್ರ ಮೊಕ್ತೇಸರ, ಅಚ್ಚುತ ಕಾಳ್ಯಂಗಾಡು,  ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲ್, ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡ್, ಕೋಶಾಧಿಕಾರಿ ಶಾಂತಕುಮಾರ್ ಮುಂಡಿತ್ತಡ್ಕ, ರಘು ಮೀಪುಗುರಿ, ವೇಣುಭಾಮ, ಮೋಹನ್ ರಾಜ್, ಮಿಥುನ್ ಕಾಳ್ಯಂಗಾಡು, ಪುಷ್ಪಾವತಿ ಮಹಾಲಿಂಗ ಮೊದಲಾದವರು ನೇತೃತ್ವ ನೀಡಿದರು. 

ಈ ಸಂದರ್ಭ ಮೆರವಣಿಗೆಯಲ್ಲಿ ಭಾರತ ಮಾತೆಯ ವೇಷ, ಹುಲಿ ವೇಷ ಕುಣಿತ, ಚೆಂಡೆ, ಬ್ಯಾಂಡ್ ವಾಲಗ, ಮೆರವಣಿಗೆಗೆ ಶೋಭೆ ನೀಡಿತ್ತು. ದಾರಿಯ ಉದ್ದಗಲಕ್ಕೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಲಘು  ಪಾನೀಯ, ಸಿಹಿತಿಂಡಿ ವಿತರಿಸಲಾಗಿತ್ತು.

Post a Comment

0 Comments